ಭಾರತೀಯ ನೌಕಾಪಡೆ ಈಗ ಮತ್ತಷ್ಟು ಶಕ್ತಿಶಾಲಿ: ನಿರ್ದೇಶಿತ ಕ್ಷಿಪಣಿ ನಾಶಕ ಐಎನ್ಎಸ್ ಇಂಫಾಲ್ ಸೇರ್ಪಡೆ

ಗುರಿ ನಿರ್ದೇಶಿತ ಕ್ಷಿಪಣಿ ನಾಶಕ ಸಮರ ನೌಕೆ ಐಎನ್ಎಸ್ ಇಂಫಾಲ್ ಭಾರತೀಯ ನೌಕಾಪಡೆಗೆ ಏ.21 ರಂದು ಸೇರ್ಪಡೆಗೊಂಡಿದ್ದು, ಭಾರತೀಯ ನೌಕಾಪಡೆ ಮತ್ತಷ್ಟು ಶಕ್ತಿಶಾಲಿಯಾಗಿದೆ.

Published: 21st April 2019 12:00 PM  |   Last Updated: 21st April 2019 03:04 AM   |  A+A-


Indian Navy launches Guided missile destroyer 'Imphal'

ಭಾರತೀಯ ನೌಕಾಪಡೆ ಈಗ ಮತ್ತಷ್ಟು ಶಕ್ತಿಶಾಲಿ: ಸ್ವದೇಶಿ ನಿರ್ಮಿತ ನಿರ್ದೇಶಿತ ಕ್ಷಿಪಣಿ ನಾಶಕ ಐಎನ್ಎಸ್ ಇಂಫಾಲ್ ಸೇರ್ಪಡೆ

Posted By : SBV SBV
Source : PTI
ಮುಂಬೈ: ಗುರಿ ನಿರ್ದೇಶಿತ ಕ್ಷಿಪಣಿ ನಾಶಕ ಸಮರ ನೌಕೆ ಐಎನ್ಎಸ್ ಇಂಫಾಲ್ ಭಾರತೀಯ ನೌಕಾಪಡೆಗೆ ಏ.21 ರಂದು ಸೇರ್ಪಡೆಗೊಂಡಿದ್ದು, ಭಾರತೀಯ ನೌಕಾಪಡೆ ಮತ್ತಷ್ಟು ಶಕ್ತಿಶಾಲಿಯಾಗಿದೆ. 

ಮುಂಬೈ ನ  ಮಜಗಾನ್‌ ಡಾಕ್ ಯಾರ್ಡ್​ ನಲ್ಲಿ ಐಎನ್ಎಸ್ ಇಂಫಾಲ್ ಗೆ ಭಾರತೀಯ ನೌಕಾಪಡೆಯ ಮುಖ್ಯಸ್ಥ ಸುನೀಲ್‌ ಲಂಬಾ ಹಾಗೂ ಅವರ ಪತ್ನಿ ನೌಕಾಪಡೆ ಪತ್ನಿಯರ ಕಲ್ಯಾಣಾಭಿವೃದ್ಧಿ ಮಂಡಳಿ ಅಧ್ಯಕ್ಷೆ ರೀನಾ ಲಂಬಾ ಅವರು ಚಾಲನೆ ನೀಡಿದರು. 

ಬಹುವಿಧದ ಉಪಯೋಗಿ ಹೆಲಿಕಾಫ್ಟರ್ ಗಳನ್ನು ಹೊತ್ತೊಯ್ದು ಕಾರ್ಯಾಚರಣೆಗೆ ಅನುವು ಮಾಡಿಕೊಡಬಲ್ಲ ಸಮರ ನೌಕೆಗಳನ್ನು ತಯಾರಿಸುವ ಯೋಜನೆಯಡಿ ತಯಾರಾಗಿರುವ 3 ನೇ ನೌಕೆ ಇಂಫಾಲ್ ಆಗಿದೆ. 
 
2011ರಲ್ಲಿ ಪ್ರಾಜೆಕ್ಟ್ 15ಬಿ ಅಡಿ ಒಟ್ಟು 4 ಸಮರ ನೌಕೆಗಳ ನಿರ್ಮಾಣಕ್ಕೆ ಒಪ್ಪಂದವಾಗಿತ್ತು. 'ಮೇಕ್‌ ಇನ್‌ ಇಂಡಿಯಾ' ಯೋಜನೆಯಡಿ 'ಐಎನ್‌ಎಸ್‌ ಇಂಫಾಲ್‌' ಸಮರ ನೌಕೆಯನ್ನು ಸ್ಥಳೀಯವಾಗಿ ಮಜಗಾನ್‌ ಡಾಕ್‌ ಲಿಮಿಟೆಡ್‌(ಎಂಡಿಎಲ್‌) ಸಂಸ್ಥೆ ನಿರ್ಮಿಸಿದ್ದು, ಭಾರತೀಯ ನೌಕಾಪಡೆ, ಡಿಆರ್‌ಡಿಒ, ಒಎಫ್‌ಬಿ, ಬಿಇಎಲ್‌, ಇತರೆ ಸಾರ್ವಜನಿಕ ಮತ್ತು ಖಾಸಗಿ ಉದ್ಯಮ ಸಂಸ್ಥೆಗಳ ಸಹಕಾರದಲ್ಲಿ ತಯಾರಿಸಲಾಗಿದೆ. 


ಐಎನ್‌ಎಸ್‌ ಇಂಫಾಲ್‌ ವಿಶೇಷತೆಗಳು
  1. ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸೆನ್ಸಾರ್‌ಗಳು, ರೆಡಾರ್‌ಗಳು
  2. 7,300 ಟನ್‌ ಹೊತ್ತೊಯ್ಯಬಲ್ಲ ಸಾಮರ್ಥ್ಯ‌ 
  3. ಗಂಟೆಗೆ 30 ನಾಟ್ಸ್‌ ವೇಗದಲ್ಲಿ ನೌಕೆ ಚಲನೆ ಸಾಮರ್ಥ್ಯ  
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp