ಶ್ರೀಲಂಕಾ ಉಗ್ರ ದಾಳಿ: ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ತೀವ್ರ ಖಂಡನೆ

ನೆರೆಯ ಶ್ರೀಲಂಕಾದಲ್ಲಿ ನಡೆದಿರುವ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಶ್ರೀಲಂಕಾ ಜನರೊಂದಿಗೆ ಭಾರತವಿದ್ದು, ಭಯೋತ್ಪಾದನೆ ಹತ್ತಿಕ್ಕಲು ಯಾವುದೇ ರೀತಿಯ ನೆರವಿಗೂ ಸಿದ್ಧ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ನೆರೆಯ ಶ್ರೀಲಂಕಾದಲ್ಲಿ ನಡೆದಿರುವ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಶ್ರೀಲಂಕಾ ಜನರೊಂದಿಗೆ ಭಾರತವಿದ್ದು, ಭಯೋತ್ಪಾದನೆ ಹತ್ತಿಕ್ಕಲು ಯಾವುದೇ ರೀತಿಯ  ನೆರವಿಗೂ ಸಿದ್ಧ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಶ್ರೀಲಂಕಾದ ಮೇಲೆ ನಡೆದಿರುವ ಉಗ್ರ ದಾಳಿಯನ್ನು ಕಟು ಶಬ್ದಹಗಳಿಂದ ಖಂಡಿಸುತ್ತೇನೆ. ಇಂತಹ ಅನಾಗರಿಕತೆಗೆ ಯಾವುದೇ ಜಾಗವಿಲ್ಲ. ಶ್ರೀಲಂಕಾದ ಜೊತೆ ಭಾರತವಿದ್ದು, ದಾಳಿಯಲ್ಲಿ ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಇದೇ ವಿಚಾರವನ್ನು ಸಿಂಹಳೀಯ ಭಾಷೆಯಲ್ಲೂ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಅಂತೆಯೇ ಈ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಕೂಡ ಟ್ವೀಟ್ ಮೂಲಕ ಸಂತ್ರಸ್ಥರ ಆತ್ಮಕ್ಕೆ ಶಾಂತಿ ಕೋರಿದ್ದು, ಭಾರತ ಸರ್ಕಾರ ಶ್ರೀಲಂಕಾ ಸರ್ಕಾರದೊಂದಿಗಿದೆ. ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಮಾಡಿರುವ ಈ ದಾಳಿಯನ್ನು ಭಾರತ ಖಂಡಿಸುತ್ತದೆ. ಅಂತೆಯೇ 'ಶ್ರೀಲಂಕಾದ ಜೊತೆ ಭಾರತವಿದ್ದು, ಭಯೋತ್ಪಾದನೆ ಹತ್ತಿಕ್ಕಲು ಯಾವುದೇ ರೀತಿಯ  ನೆರವಿಗೂ ಸಿದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಈಸ್ಟರ್ ಭಾನುವಾರದ ದಿನವಾದ ಇಂದು (ಏ. 21)ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಮೂರು ಹೋಟೆಲ್ ಗಳಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ 137 ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿ,  300ಕ್ಕೂ  ಮಂದಿ ಗಾಯಗೊಂಡಿದ್ದಾರೆ. ಕೊಲೊಂಬೊದಲ್ಲಿನ ಸೇಂಟ್ ಅಂತೋನಿ ಚರ್ಚ್, ಪಶ್ಚಿಮ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬ್ಯಾಟಿಕೊಲೊದಲ್ಲಿರುವ ಮತ್ತೊಂದು ಚರ್ಚ್ನಲ್ಲಿ ಸ್ಪೋಟ ಸಂಬವಿಸಿದೆ. ಅಲ್ಲದೆ ಪಂಚತಾರಾ ಹೋಟೆಲುಗಳಾದ  ಶಾಂಗ್ರಿಲಾ, ಸಿನ್ನಮೋನ್ ಗ್ರಾಂಡ್ ಮತ್ತು ಕಿಂಗ್ಸ್ ಬರಿ ಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com