ಶ್ರೀಲಂಕಾ ಉಗ್ರ ದಾಳಿ: ಕೊಹ್ಲಿ, ಸಾನಿಯಾ ಸೇರಿದಂತೆ ಖ್ಯಾತನಾಮ ಕ್ರೀಡಾಪಟುಗಳಿಂದ ತೀವ್ರ ಖಂಡನೆ!

ಶ್ರೀಲಂಕಾದಲ್ಲಿ ಇಂದು ನಡೆದ ಭೀಕರ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಹಲವು ಖ್ಯಾತನಾಮ ಕ್ರೀಡಾಪಟುಗಳು ತೀವ್ರವಾಗಿ ಖಂಡಿಸಿದ್ದಾರೆ.

Published: 21st April 2019 12:00 PM  |   Last Updated: 21st April 2019 02:15 AM   |  A+A-


Virat Kohli, Sania Mirza and more condemn Sri Lanka church blast tragedy

ಲಂಕಾ ಬಾಂಬ್ ಸ್ಫೋಟ

Posted By : SVN SVN
Source : Online Desk
ನವದೆಹಲಿ: ಶ್ರೀಲಂಕಾದಲ್ಲಿ ಇಂದು ನಡೆದ ಭೀಕರ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಹಲವು ಖ್ಯಾತನಾಮ ಕ್ರೀಡಾಪಟುಗಳು ತೀವ್ರವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕ್ರೀಡಾಪಟುಗಳು ಶ್ರೀಲಂಕಾ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದವರಿಗಾಗಿ ಸಂತಾಪ ಸೂಚಿಸಿದ್ದಾರೆ. 

ಕೋಲಂಬೊ, ಶ್ರೀಲಂಕಾ: ಶ್ರೀಲಂಕಾದಲ್ಲಿ ಇಂದು ಸಂಭವಿಸಿದ ಭೀಕರ ಸರಣಿ ಬಾಂಬ್​ ಸ್ಫೋಟದಲ್ಲಿ ಮಡಿದವರಿಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿದ್ದು, ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಸ್ಫೋಟದ ಬಗ್ಗೆ ಕೇಳಿ ತೀವ್ರ ಆಘಾತವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಸಾನಿಯಾ ಮಿರ್ಜಾ, ಈ ಪ್ರಪಂಚಕ್ಕೆ ಏನಾಗಿದೆ. ಓ ದೇವರ ದಯಮಾಡಿ ರಕ್ಷಿಸು ಎಂದು ಹೇಳಿದ್ದಾರೆ.

ಈಸ್ಟರ್ ಸಂಡೇ ಪ್ರೇಯರ್ ವೇಳೆ ಮೂರು ಚರ್ಚ್​ ಹಾಗೂ ಮೂರು ಫೈವ್​ ಸ್ಟಾರ್​ ಹೋಟೆಲ್​​ ಸೇರಿದಂತೆ 6ಕ್ಕೂ ಹೆಚ್ಚು ಕಡೆ ಬಾಂಬ್​ ಸ್ಫೋಟಿಸಿದ್ದು 156ಕ್ಕೂ ಹೆಚ್ಚು ಅಮಾಯಕರು ಮೃತಪಟ್ಟಿದ್ದಾರೆ, 500ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 
Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp