ಸಿಜೆಐ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ಫುಲ್ ಕೋರ್ಟ್ ಗೆ ವಕೀಲರ ಪಟ್ಟು!

ಸಿಜೆಐ ರಂಜನ್ ಗೊಗೋಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪವನ್ನು ಫುಲ್ ಕೋರ್ಟ್ ( ಎಲ್ಲಾ ನ್ಯಾಯಮೂರ್ತಿಗಳು ಸೇರಿ ನಡೆಸುವ ಆಂತರಿಕ ಸಭೆ) ವಿಚಾರಣೆಗೊಳಪಡಿಸಬೇಕೆಂದು ಸುಪ್ರೀಂ

Published: 22nd April 2019 12:00 PM  |   Last Updated: 22nd April 2019 09:45 AM   |  A+A-


Lawyers want 'full court' to hear allegations against CJI

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ಫುಲ್ ಕೋರ್ಟ್ ಗೆ ವಕೀಲರ ಪಟ್ಟು!

Posted By : SBV SBV
Source : IANS
ನವದೆಹಲಿ: ಸಿಜೆಐ ರಂಜನ್ ಗೊಗೋಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪವನ್ನು ಫುಲ್ ಕೋರ್ಟ್ ( ಎಲ್ಲಾ ನ್ಯಾಯಮೂರ್ತಿಗಳು ಸೇರಿ ನಡೆಸುವ ಆಂತರಿಕ ಸಭೆ) ವಿಚಾರಣೆಗೊಳಪಡಿಸಬೇಕೆಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ (ಎಸ್ ಸಿಬಿಎ) ಹಾಗೂ ಸುಪ್ರೀಂ ಕೋರ್ಟ್ ನ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಸಂಘಟನೆ ಒತ್ತಾಯಿಸಿದೆ. 

ಸಿಜೆಐ ವಿರುದ್ಧ ಕೇಳಿಬಂದಿರುವ ಆರೋಪವನ್ನು ಸ್ವಯಂಪ್ರೇರಿತವಾಗಿ ಏ.20 ರಂದು ವಿಚಾರಾಣೆಗೆ ಕೈಗೆತ್ತಿಕೊಂಡಿರುವ ಕ್ರಮವನ್ನು ಈ ಎರಡೂ ಸಂಘಟನೆಗಳು ಅಪಸ್ವರವೆತ್ತಿವೆ. 

ಮುಖ್ಯನ್ಯಾಯಾಧೀಶರ ವಿರುದ್ಧ ಆರೋಪ ಮಾಡಿರುವವರೂ ಸಹ ಸುಪ್ರೀಂ ಕೋರ್ಟ್ ನ ಮಾಜಿ ನೌಕರರಾಗಿರುವುದರಿಂದ ಸ್ಥಾಪಿತ ಕಾನೂನಿನ ಪ್ರಕ್ರಿಯೆಯಂತೆಯೇ ಈ ದೂರನ್ನು ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ವಕೀಲರು ಪಟ್ಟು ಹಿಡಿದಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp