ಗ್ಯಾಂಗ್-ರೇಪ್ ಸಂತ್ರಸ್ತೆ ಬಿಲ್ಕಿಸ್ ಬನೊಗೆ 50 ಲಕ್ಷ ರು. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ 'ಸುಪ್ರೀಂ' ತಾಕೀತು

2002ರಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಬಿಲ್ಕಿಸ್ ಬಾನೊಗೆ ಎರಡು ವಾರಗಳೊಳಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಬಿಲ್ಕಿಸ್ ಬಾನೊ
ಬಿಲ್ಕಿಸ್ ಬಾನೊ
ನವದೆಹಲಿ: 2002ರಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆ ಬಿಲ್ಕಿಸ್ ಬಾನೊಗೆ ಎರಡು ವಾರಗಳೊಳಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಲ್ಲದೇ, ಅವರಿಗೆ ಸರ್ಕಾರಿ ಉದ್ಯೋಗ ಹಾಗೂ ಮನೆ  ಒದಗಿಸುವಂತೆಯೂ  ಸರ್ಕಾರಕ್ಕೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ.


2002ರ ಮಾರ್ಚ್ ನಲ್ಲಿ ಗೋಧ್ರಾ ಗಲಭೆಯ ಬಳಿಕ ನಡೆದ ಹಿಂಸಾಚಾರದ ಸಂದರ್ಭ ಗರ್ಭೀಣಿಯಾಗಿದ್ದ  ಬಿಲ್ಕಿಸ್ ಬಾನೊ ಮೇಲೆ ರಾಧಿಕ್ ಪುರ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಯ  14 ಮಂದಿ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿತ್ತು.

ಐವರು ಪೊಲೀಸ್ ಅಧಿಕಾರಿಗಳು,  ಇಬ್ಬರು ವೈದ್ಯರು,  ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ದೋಷಿಗಳೆಂದು  ತೀರ್ಮಾನಿಸಿ  ಪ್ರಕರಣದಲ್ಲಿ ಒಟ್ಟು 12 ಮಂದಿಗೆ ಬಾಂಬೆ ಹೈಕೋರ್ಟ್  ಮೇ 4, 2017ರಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

2008ರಲ್ಲಿ  ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ, 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಐವರು ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ಸರ್ಕಾರಿ ವೈದ್ಯರನ್ನು ಬಿಡುಗಡೆಗೊಳಿಸಿತ್ತು.

ಬಾಂಬೆ ಹೈಕೋರ್ಟ್ ತಪಿತಸ್ಥರು ಘೋಷಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಸೂಚನೆ ನೀಡಿತ್ತು.  ಗುಜರಾತ್ ಸರ್ಕಾರದಿಂದ 5 ಲಕ್ಷ ಪರಿಹಾರ ಪಡೆಯಲು ಈ ಹಿಂದೆ ಬಿಲ್ಕಿಸ್ ಬಾನೊ ನಿರಾಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com