ಮಾಜಿ ಸಿಎಂ ಎನ್ ​ಡಿ ತಿವಾರಿ ಮಗ ರೋಹಿತ್​​ ಶೇಖರ್​ ಸಾವು; ಪತ್ನಿ ಅಪೂರ್ವ ಶುಕ್ಲಾ ಬಂಧನ

ವಾರದ ಹಿಂದೆ ಮೃತಪಟ್ಟ ಉತ್ತರ ಪ್ರದೇಶದ ಮಾಜಿ ಸಿಎಂ ಎನ್​ ಡಿ ತಿವಾರಿ ಮಗ ರೋಹಿತ್​ ಶೇಖರ್​ ಸಾವು ಯೋಜಿತ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಸಾವಿನ ಹಿಂದೆ ಅವರ ಹೆಂಡತಿ ಅಪೂರ್ವ ಶುಕ್ಲಾ ಕೈವಾಡವಿರುವ ಶಂಕೆಯ ಮೇರೆಗೆ ಪೋಲಿಸರು ಅವರನ್ನು ಇಂದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಾರದ ಹಿಂದೆ ಮೃತಪಟ್ಟ ಉತ್ತರ ಪ್ರದೇಶದ ಮಾಜಿ ಸಿಎಂ ಎನ್​ ಡಿ ತಿವಾರಿ ಮಗ ರೋಹಿತ್​ ಶೇಖರ್​ ಸಾವು ಯೋಜಿತ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು,  ಈ ಸಾವಿನ ಹಿಂದೆ ಅವರ ಹೆಂಡತಿ ಅಪೂರ್ವ ಶುಕ್ಲಾ ಕೈವಾಡವಿರುವ ಶಂಕೆಯ ಮೇರೆಗೆ ಪೋಲಿಸರು ಅವರನ್ನು ಇಂದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ರೋಹಿತ್​ ಶೇಖರ್​ ಸಾವಿನ ಹಿಂದೆ ಅನುಮಾನ ವ್ಯಕ್ತಪಡಿಸಿದ್ದ ದೆಹಲಿ ಅಪರಾಧ ವಿಭಾಗದ ಅಧಿಕಾರಿಗಳು ವಿಧಿವಿಜ್ಞಾನ ವರದಿಗೆ ಕಾಯುತ್ತಿದ್ದಾರೆ. ರೋಹಿತ್​ ಸಾವಿನಲ್ಲಿ ಮನೆಯಲ್ಲಿ ಇರುವ ಶಂಕಿತ ವ್ಯಕ್ತಿಗಳು  ಕಾರಣವಾಗಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಸಾಕ್ಷಿಗಳು ನಮಗೆ ಇದುವರೆಗೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಮನೆಯಲ್ಲಿ ಕೆಲಸ ಮಾಡುವ ಇಬ್ಬರ ಸಹಾಯದಿಂದಾಗಿ ಶುಕ್ಲಾ, ಗಂಡನ​ ಸಾವಿನ ಸಂಚು ರೂಪಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಈ ಕುರಿತು ತನಿಖೆಗಾಗಿ ದೆಹಲಿ ಪೊಲೀಸರು ಭಾನುವಾರ ಶುಕ್ಲಾರನ್ನು ವಶಕ್ಕೆ ಪಡೆದಿದ್ದು, ಅವರನ್ನು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇನ್ನು ರೋಹಿತ್​ ಹಾಗೂ ಶುಕ್ಲಾ ನಡುವೆ ಉತ್ತಮ ಸಂಬಂಧವಿರಲಿಲ್ಲ ಎಂದು ಶೇಖರ್​ ಅಮ್ಮ ಉಜ್ವಲ ತಿವಾರಿ ಈ ಹಿಂದಿನ ವಿಚಾರಣೆಯಲ್ಲಿ ತಿಳಿಸಿದ್ದರು.  ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಭೋಲು ಮಂಡಲ್ ಎಂಬಾತ ರೋಹಿತ್​ ಮೂಗಿನಿಂದ ರಕ್ತ ಸೋರುತ್ತಿತ್ತು ಎಂದು ಈತ ತಿಳಿಸಿದ್ದ.
ರೋಹಿತ್‌ ಶೇಖರ್‌ ಅವರು ಈ ಹಿಂದೆ ಎನ್​ ಡಿ ತಿವಾರಿ ನನ್ನ ಅಪ್ಪ. ಆದರೆ ಇದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ ಎಂದು ಕೋರ್ಟ್​ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಏಳು ವರ್ಷಗಳ ಕಾಲ ವಿಚಾರಣೆ ನಡೆದ ಬಳಿಕ 2014ರಲ್ಲಿ ಡಿಎನ್​ಎ ಪರೀಕ್ಷೆಯಲ್ಲಿ ರೋಹಿತ್​ ಮಾಜಿ ಸಿಎಂ ಅವರ ಮಗ ಎಂಬುದು ಸಾಬೀತಾಗಿತ್ತು. ಬಳಿಕ ತಮ್ಮ ಮಗ ಎಂದು ರೋಹಿತ್​ ಅವರನ್ನು ತಿವಾರಿ ಒಪ್ಪಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com