ಅಕ್ರಮ ಗಣಿಗಾರಿಕೆ; ಎಂ.ಕೆ. ಅಳಗಿರಿ ಪುತ್ರನ 40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಅಕ್ರಮ ಗ್ರಾನೈಟ್ ಗಣಿಗಾರಿಕೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಪುತ್ರ ದಯಾನಿಧಿ ಅಳಗಿರಿಗೆ 40.34 ಕೋಟಿ ರೂ ಮೌಲ್ಯದ 25 ಸ್ಥಿರ-ಚರಾಸ್ತಿಗಳನ್ನು ಜಾರಿ
ಅಕ್ರಮ ಗಣಿಗಾರಿಕೆ;   ಎಂ.ಕೆ. ಅಳಗಿರಿ ಪುತ್ರನ  40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ಅಕ್ರಮ ಗಣಿಗಾರಿಕೆ; ಎಂ.ಕೆ. ಅಳಗಿರಿ ಪುತ್ರನ 40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು
ನವದೆಹಲಿ: ಅಕ್ರಮ ಗ್ರಾನೈಟ್  ಗಣಿಗಾರಿಕೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಪುತ್ರ ದಯಾನಿಧಿ ಅಳಗಿರಿಗೆ 40.34 ಕೋಟಿ ರೂ ಮೌಲ್ಯದ 25 ಸ್ಥಿರ-ಚರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲುಹಾಕಿಕೊಂಡಿದೆ. 
ಅಳಗಿರಿ ದಯಾನಿಧಿ ಹಾಗೂ  ಎಸ್. ನಾಗರಾಜನ್  ಒಲಿಂಪಸ್ ಗ್ರಾನೈಟ್ಸ್ ಕಂಪನಿಯ ಪ್ರವರ್ತಕರು, ಶೇರುದಾರರು ಹಾಗೂ ನಿರ್ದೇಶಕರಾಗಿದ್ದಾರೆ ಮಧುರೈ ಒಲಿಂಪಸ್ ಕಂಪನಿ ಹಾಗೂ ಅದರ ಪ್ರವರ್ತಕರು ಹಾಗೂ ಇತರ ವ್ಯಕ್ತಿಗಳ  ವಿರುದ್ಧ  ತಮಿಳುನಾಡು ಪೊಲೀಸರು ದೂರು ದಾಖಲಿಸಿ, ದೋಷಾರೋಪಪಟ್ಟಿ ಸಲ್ಲಿಸಿದ ನಂತರ  ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.
ಕಂಪನಿ ಹಾಗೂ ಇತರ ವ್ಯಕ್ತಿಗಳು   ಅಕ್ರಮ ಗ್ರಾನೈಟ್ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ  ಎಂದು ಭಾರತೀಯ ದಂಡ ಸಂಹಿತೆ  ವಿವಿಧ ಕಲಂ ಹಾಗೂ  ಸ್ಪೋಟಕ ವಸ್ತುಗಳ ಕಾಯ್ದೆ ಅಡಿ ವಿವಿಧ ಅಪರಾಧ ಎಸಗಲಾಗಿದೆ ಎಂದು  ದೂರಲಾಗಿದೆ.
ತಮಿಳುನಾಡು ಖನಿಜ ನಿಗಮಕ್ಕೆ ಗುತ್ತಿಗೆ ನೀಡಿರುವ ಸುತ್ತಮುತ್ತಲ ಪ್ರದೇಶಗಳಲ್ಲಿ  ಅಕ್ರಮವಾಗಿ ಗಣಿಗಾರಿಕೆ ನಡೆಸಿ, ಸರ್ಕಾರ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು  ಕಂಪನಿಯ ನಿರ್ದೇಶಕರು, ಪ್ರವರ್ತಕರ ವಿರುದ್ದ  ಅಪರಾಧಿಕ ಸಂಚು ಆರೋಪ ಹೊರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com