ಪ್ರಧಾನಿ ಮೋದಿ ಸಂದರ್ಶನ: ನಟ ಅಕ್ಷಯ್ ನನ್ನು 'ವಿಲನ್' ಎಂದು ಕಿಡಿಕಾರಿದ ತಮಿಳು ನಟ ಸಿದ್ಧಾರ್ಥ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಸಂದರ್ಶನ ನಡೆಸಿದ್ದರು. ಇನ್ನು ಪದೇ ಪದೇ ಪ್ರಧಾನಿ ಮೋದಿ ವಿರುದ್ಧ ಎಗರಾಡುವ ತಮಿಳು ನಟ ಸಿದ್ಧಾರ್ಥ್ ಅಕ್ಷಯ್ ಕುಮಾರ್ ರನ್ನು ವಿಲನ್ ಎಂದು ಕರೆದಿದ್ದಾರೆ.
ಅಕ್ಷಯ್ ಕುಮಾರ್-ನರೇಂದ್ರ ಮೋದಿ-ಸಿದ್ಧಾರ್ಥ

ಪ್ರಧಾನಿ ಮೋದಿ ಮತ್ತು ಅಕ್ಷಯ್ ಕುಮಾರ್ ಸಂದರ್ಶನ ರಾಜಕೀಯೇತ್ತರ ಮಾತುಕತೆಯಾಗಿತ್ತು. ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ನಾಯಕರ ಜತೆ ತಮ್ಮ ಸ್ನೇಹ ಹೀಗೆ ಹಲವಾರು ಸಂಗತಿಗಳನ್ನು ಅಕ್ಷಯ್ ಎದುರು ಮೋದಿ ಹಂಚಿಕೊಂಡಿದ್ದರು.
ಇದಕ್ಕೆ ಕಿಡಿಕಾರಿರುವ ಸಿದ್ಧಾರ್ಥ್ ತಮ್ಮ ಟ್ವೀಟರ್ ನಲ್ಲಿ ನೇರವಾಗಿ ಅಕ್ಷಯ್ ಕುಮಾರ್ ಮೇಲೆಯೇ ದಾಳಿ ಮಾಡಿದ್ದು ಅಕ್ಷಯ್ ಕುಮಾರ್ ಒಬ್ಬ ಬೆಲೆ ಅರಿಯದ ವಿಲನ್ ಎಂದು ಜರಿದಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com