ಕಾಡಿನಲ್ಲಲ್ಲ, ಜೈಶ್ ಸಂಘಟನೆಯ 5 ಬಿಡಾರಗಳ ಮೇಲೆ ಮಿರಾಜ್-2000 ನಿಖರ ದಾಳಿ: ಐಎಎಫ್ ವರದಿ

ಬಾಲಾಕೋಟ್ ನ ಯಾವುದೊ ಕಾಡಿನ ಮಧ್ಯೆ ಭಾರತೀಯ ವಾಯುಸೇನೆ ಬಾಂಬ್ ದಾಳಿ ನಡೆಸಿದೆ ಎಂಬ ಹೇಳಿಕೆಗಳು ರಾಜಕೀಯ ನಾಯಕರ ಬಾಯಿಂದ ಬರುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಬಾಲಾಕೋಟ್ ನ ಯಾವುದೊ ಕಾಡಿನ ಮಧ್ಯೆ ಭಾರತೀಯ ವಾಯುಸೇನೆ ಬಾಂಬ್ ದಾಳಿ ನಡೆಸಿದೆ ಎಂಬ ಹೇಳಿಕೆಗಳು ರಾಜಕೀಯ ನಾಯಕರ ಬಾಯಿಂದ ಬರುತ್ತಿದೆ. ಆದರೆ ಭಾರತೀಯ ವಾಯುಸೇನೆ ಮಾತ್ರ ನಮ್ಮ ಮಿರಾಜ್ 2000 ಯುದ್ಧ ವಿಮಾನ ಜೈಶ್ ಉಗ್ರ ಸಂಘಟನೆಯ 6 ಟಾರ್ಗೆಟ್ ಪೈಕಿ 5 ಟಾರ್ಗೆಟ್ ಗಳಲ್ಲಿ ನಿಖರ ದಾಳಿ ನಡೆಸಿ ಯಶಸ್ವಿಯಾಗಿದೆ ಎಂದು ಐಎಎಫ್ ಹೇಳಿದೆ. 
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಫೆಬ್ರವರಿ 26ರಂದು ಭಾರತೀಯ ವಾಯುಸೇನೆಯ ಮಿರಾಜ್ 2000 ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ಬಾಲಾಕೋಟ್ ನಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಈ ವೇಳೆ 6 ಟಾರ್ಗೆಟ್ ಪೈಕಿ 5 ಟಾರ್ಗೆಟ್ ಗಳನ್ನು ಮಿರಾಜ್ ಯಶಸ್ವಿಯಾಗಿ ಮುಗಿಸಿದೆ ಎಂದು ಐಎಎಫ್ ವರದಿಯಲ್ಲಿ ತಿಳಿಸಿದೆ.
ಇನ್ನು ಫೆಬ್ರವರಿ 27ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಭಾರತದ ಗಡಿ ದಾಟಿ ಒಳ ಬಂದಿದ್ದು ಇದನ್ನು ಮಿರಾಜ್ ಯುದ್ಧ ವಿಮಾನಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದವು. ಇದು ಆಗಸದಲ್ಲಿ ನಮ್ಮ ಸೇನೆಯ ಪರಾಕ್ರಮದ ಸಾಧನೆಗಳು ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com