ಶ್ರೀಲಂಕಾ ದಾಳಿಗು ಮುನ್ನವೇ ಉಗ್ರರ ಹೆಸರು, ವಿಳಾಸ, ದಾಳಿ ನಡೆಯುವ ಸಮಯ ಎಲ್ಲ ಮಾಹಿತಿ ನೀಡಿದ್ದ ಭಾರತ!

359 ಮಂದಿಯ ಮಾರಣ ಹೋಮಕ್ಕೆ ಕಾರಣವಾದ ಶ್ರೀಲಂಕಾ ಉಗ್ರ ದಾಳಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದಾಳಿ ನಡೆಯುವ 10 ದಿನಗಳ ಮುನ್ನವೇ ಭಾರತೀಯ ಗುಪ್ತಚರ ಇಲಾಖೆ ಶ್ರೀಲಂಕಾ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ನೀಡಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 359 ಮಂದಿಯ ಮಾರಣ ಹೋಮಕ್ಕೆ ಕಾರಣವಾದ ಶ್ರೀಲಂಕಾ ಉಗ್ರ ದಾಳಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ದಾಳಿ ನಡೆಯುವ 10 ದಿನಗಳ ಮುನ್ನವೇ ಭಾರತೀಯ ಗುಪ್ತಚರ ಇಲಾಖೆ ಶ್ರೀಲಂಕಾ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ನೀಡಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಹೌದು... ಶ್ರೀಲಂಕಾದಲ್ಲಿ ಕಳೆದ ಭಾನುವಾರ ನಡೆದ ಭೀಕರ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ನಡೆಯುನ 10 ದಿನಗಳ ಮುನ್ನವೇ ಭಾರತೀಯ ಗುಪ್ತಚರ ಇಲಾಖೆ ದಾಳಿಯ ಕುರಿತು ಶ್ರೀಲಂಕಾಗೆ ಮಾಹಿತಿ ನೀಡಿತ್ತು. ಆದರೂ ಶ್ರೀಲಂಕಾ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎನ್ನಲಾಗಿದೆ. 
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಶ್ರೀಲಂಕಾ ದಾಳಿಗೂ ಮುನ್ನ ಸುಮಾರು 10 ದಿನಗಳ ಮುಂಚಿತವಾಗಿ ಅಂದರೆ ಏಪ್ರಿಲ್ 11ರಂದೇ ಭಾರತೀಯ ಗುಪ್ತಚರ ಇಲಾಖೆ ಶ್ರೀಲಂಕಾಗೆ ಸಂಪೂರ್ಣ ಮಾಹಿತಿ ನೀಡಿತ್ತು. ದಾಳಿ ಸಂಭವಿಸುವ ದಿನಾಂಕ, ಸ್ಥಳ, ಸಮಯ ಮತ್ತು ಉಗ್ರರ ಹೆಸರು ಮತ್ತು ಸಂಪೂರ್ಣ ವಿಳಾಸವನ್ನು ಶ್ರೀಲಂಕಾ ಸರ್ಕಾರಕ್ಕೆ ನೀಡಿತ್ತು ಎಂದು ತಿಳಿದುಬಂದಿದೆ.  ಕೇವಲ ಇಷ್ಟು ಮಾತ್ರವಲ್ಲದೇ ಉಗ್ರರ ಫೋನ್ ನಂಬರ್ ಗಳು, ಅವರ ಅಡಗುದಾಣ, ಅವರ ಹಿನ್ನಲೆ, ದಾಳಿ ನಡೆಯುವ ಚರ್ಚ್ ಗಳು, ಹೊಟೆಲ್ ಗಳು ಸೇರಿದಂತೆ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಆದರೂ ಶ್ರೀಲಂಕಾ ಸರ್ಕಾರ ಈ ಕುರಿತು ದಿವ್ಯ ನಿರ್ಲಕ್ಷ್ಯ ವಹಿಸಿತ್ತು ಎನ್ನಲಾಗಿದೆ. 
60 ಮಂದಿಯ ಬಂಧನ
ಸರಣಿ ಬಾಂಬ್‌ ಸ್ಫೋಟ ಸಂಬಂಧ ಈ ವರೆಗೂ 60 ಮಂದಿಯನ್ನು ಲಂಕಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಮುಸ್ಲಿಂ ಸಮುದಾಯದವರು ಎಂದು ತಿಳಿಸಿರುವ ಪೊಲೀಸ್‌ ಅಧಿಕಾರಿಗಳು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ಬಂಧಿತರ ಸಂಖ್ಯೆ 100ಕ್ಕೆ ಏರಿಕೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ರಿವಾ ವಿಜೆವರ್ನೆ, 'ಬಂಧಿತರಿಗೆ ಹೆಚ್ಚಿನ ಪ್ರಚಾರ ಸಿಗುವುದನ್ನು ತಡೆಯಲು ದಾಳಿಯಲ್ಲಿ ತೊಡಗಿರುವ ಶಂಕಿತರ ಮಾಹಿತಿ ಬಹಿರಂಗಪಡಿಸದೇ ಇರಲು ನಿರ್ಧರಿಸಲಾಗಿದೆ. ಮೂರು ಹೋಟೆಲ್ ಗಳ ಮೇಲೆ ದಾಳಿ ನಡೆಸಲು ಸ್ಫೋಟಕ ಸಾಗಿಸಿದ ವ್ಯಾನ್‌ ಅನ್ನು ವಶಕ್ಕೆ ಪಡೆದಿದ್ದು, ವ್ಯಾನ್‌ ಚಾಲಕನನ್ನು ಬಂಧಿಸಲಾಗಿದೆ. ಚಾಲಕ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ದಾಳಿ ನಡೆಸುವ ಮುನ್ನ ಮೂರು ತಿಂಗಳು ಕಾಲ ಉಗ್ರರು ತಂಗಿದ್ದ ಅಡಗುತಾಣವನ್ನು ಪತ್ತೆಹಚ್ಚಲಾಗಿದ್ದು, ಅದು ದಕ್ಷಿಣ ಕೊಲಂಬೊದ ಪನಾಡುರಾ ಉಪನಗರದಲ್ಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com