ಟಾರ್ಗೆಟ್ ಯೋಗಿ ಆದಿತ್ಯನಾಥ್, ಮೋಹನ್ ಭಾಗ್ವತ್; ರೈಲು ನಿಲ್ದಾಣ, ದೇವಾಲಯಗಳ ಮೇಲೆ ದಾಳಿ: ಜೈಶ್ ಬೆದರಿಕೆ

ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಯೋಗಿ ಆದಿತ್ಯನಾಥ್,...
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಲಖನೌ: ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತ ವೈಮಾನಿಕ ದಾಳಿ ನಡೆಸಿದ ಬೆನ್ನಲ್ಲೇ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಯೋಗಿ ಆದಿತ್ಯನಾಥ್, ಅರವಿಂದ್ ಕೇಜ್ರಿವಾಲ್, ಆರ್ ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಅವರನ್ನು ಟಾರ್ಗೆಟ್ ಮಾಡಿರುವುದಾಗಿ ಹೇಳಿದೆ. 
ಪಾಕ್ ಉಗ್ರ ಸಂಘಟನೆಯಿಂದ ಪ್ರಕಟಗೊಂಡಿರುವ 2 ಪ್ರತ್ಯೇಕ ಪತ್ರಗಳಿಂದ ಈ ಮಾಹಿತಿ ಬಹಿರಂಗಗೊಂಡಿದ್ದು, ಪತ್ರದಲ್ಲಿ ತಮ್ಮ ಮುಂದಿನ ಟಾರ್ಗೆಟ್ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಎಂದು ತಿಳಿಸಲಾಗಿದೆ. ಈ ಮಾಹಿತಿಯನ್ನು ಉತ್ತರ ಪ್ರದೇಶ ಪೊಲೀಸರು ನೀಡಿದ್ದಾರೆ. 
ಉತ್ತರಪ್ರದೇಶದ ಶಾಮ್ಲಿ ಹಾಗೂ ಉತ್ತರಾಖಂಡ್ ನ ರೂರ್ಕಿ ರೈಲ್ವೆ ನಿಲ್ದಾಣಗಳಲ್ಲಿ ಜೈಶ್-ಉಗ್ರ ಸಂಘಟನೆಯ ಪತ್ರಗಳು ಲಭ್ಯವಾಗಿದ್ದು, ರೈಲು ನಿಲ್ದಾಣ ಹಾಗೂ ದೇವಾಲಯಗಳನ್ನು ಸ್ಫೋಟಿಸುವುದಾಗಿ ಹೇಳಲಾಗಿದೆ. ಉಗ್ರ ಸಂಘಟನೆಯ ಪತ್ರಗಳು ದೊರೆತ ಹಿನ್ನೆಯಲ್ಲಿ ಉತ್ತರ ಪ್ರದೇಶದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com