ಉಗ್ರ ದಾಳಿ ಹಿನ್ನಲೆ, ಅನಿವಾರ್ಯದ ಹೊರತು ಶ್ರೀಲಂಕಾಗೆ ಪ್ರಯಾಣ ಬೇಡ; ವಿದೇಶಾಂಗ ಇಲಾಖೆ ಸೂಚನೆ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಉಗ್ರ ದಾಳಿ ಮತ್ತು ಸೇನಾ ಕಾರ್ಯಾಚರಣೆ ಹಿನ್ನಲೆಯಲ್ಲಿ ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಸುರಕ್ಷತಾ ಸಲಹೆ ನೀಡಿದ್ದು, ಅನಿವಾರ್ಯದ ಹೊರತು ಶ್ರೀಲಂಕಾಗೆ ಪ್ರಯಾಣ ಬೇಡ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಉಗ್ರ ದಾಳಿ ಮತ್ತು ಸೇನಾ ಕಾರ್ಯಾಚರಣೆ ಹಿನ್ನಲೆಯಲ್ಲಿ ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ಸುರಕ್ಷತಾ ಸಲಹೆ ನೀಡಿದ್ದು, ಅನಿವಾರ್ಯದ ಹೊರತು ಶ್ರೀಲಂಕಾಗೆ ಪ್ರಯಾಣ ಬೇಡ ಎಂದು ಹೇಳಿದೆ.
ಶನಿವಾರ ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆ ಮುಂಜಾಗ್ರತಾ ಮಾರ್ಗದರ್ಶಕ ಸೂಚನೆಗಳನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ಶ್ರೀಲಂಕಾದಲ್ಲಿ ನಡೆಯುತ್ತಿರುವ ಉಗ್ರ ದಾಳಿ ಮತ್ತು ಅದರ ವಿರುದ್ಧದ ಶ್ರೀಲಂಕಾ ಸೇನಾ ಕಾರ್ಯಾಚರಣೆ ಹಿನ್ನಲೆಯಲ್ಲಿ ಅಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಲಾಗಿದೆ. ಹೀಗಾಗಿ ಈ ಪರಿಸ್ಥಿತಿ ಶ್ರೀಲಂಕಾಗೆ ಅನವಶ್ಯಕ ಪ್ರಯಾಣ ಬೇಡ ಎಂದು ಕೇಂದ್ರ ವಿದೇಶಾಂಗ ಇಲಾಖೆ ಸಲಹೆ ನೀಡಿದೆ.
ಅಲ್ಲದೆ ಒಂದು ವೇಳೆ ಅನಿವಾರ್ಯವಾಗಿ ಶ್ರೀಲಂಕಾಗೆ ಪ್ರಯಾಣ ಮಾಡಲು ಬಯಸಿದವರು ಮತ್ತು ಶ್ರೀಲಂಕಾದಲ್ಲಿರುವ ಭಾರತೀಯರಿಗೆ ಯಾವುದೇ ರೀತಿಯ ನೆರವು ಬೇಕಿದ್ದರೂ ಕೊಲಂಬೋ, ಕ್ಯಾಂಡಿ, ಹಂಬೋಟೊಂಟಾ ಮತ್ತು ಜಾಫ್ನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಕೇಂದ್ರ ವಿದೇಶಾಂಗ ಇಲಾಖೆ ಸೂಚಿಸಿದೆ. 
ಕಳೆದ ಈಸ್ಚರ್ ಸಂಡೇಯಂದು ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ್ದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ 253 ಮಂದಿ ಸಾವಿಗೀಡಾಗಿದ್ದರು. ಅಲ್ಲದೆ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಲ್ಲದೆ ಇದಾದ ಬೆನ್ನಲ್ಲೇ ಶ್ರೀಲಂಕಾ ಸೇನೆ ಶುಕ್ರವಾರದಿಂದ ಇಸಿಸ್ ಉಗ್ರರ ಅಡಗುದಾಣಗಳ ಮೇಲೆ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದು, ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು, 6 ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಲಂಕಾದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com