ಗೋವಾ: ಹೋಟೆಲ್ ನಲ್ಲಿ ಪ್ರವಾಸಿ ಮಹಿಳೆಯ ಮೃತದೇಹ ಪತ್ತೆ

ಹೋಟೆಲ್ ನ ಕೊಠಡಿವೊಂದರಲ್ಲಿ ಪ್ರವಾಸಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಇಂದು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗೋವಾ:  ಹೋಟೆಲ್ ನ ಕೊಠಡಿವೊಂದರಲ್ಲಿ ಪ್ರವಾಸಿ ಮಹಿಳೆಯೊಬ್ಬರ ಮೃತದೇಹ  ಪತ್ತೆಯಾಗಿರುವುದಾಗಿ ಪೊಲೀಸರು ಇಂದು  ಹೇಳಿದ್ದಾರೆ.

ಮೃತ ಮಹಿಳೆಯನ್ನು ಹಿಮಾಚಲ ಪ್ರದೇಶದ ನಿವಾಸಿ ಅಲ್ಕಾ ಸೈನಿ ಎಂದು ಗುರುತಿಸಲಾಗಿದೆ. ಆಕೆಯ ಬಾಯ್ ಫ್ರೆಂಡ್  ಸುಕುವಿಂದರ್ ಸಿಂಗ್ ಜೊತೆಗೆ ಗೋವಾಕ್ಕೆ ಆಗಮಿಸಿದ್ದ ಅಲ್ಕಾ ಸೈನಿ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದರು.  ಏಪ್ರಿಲ್ 20 ರಂದು ಇಬ್ಬರು ಹೋಟೆಲ್ ಗೆ ಆಗಮಿಸಿರುವುದಾಗಿ ತಿಳಿದುಬಂದಿದೆ.

ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಅಲ್ಕಾ ಸೈನಿ ಮೃತಪಟ್ಟಿರುವ ಬಗ್ಗೆ ಹೋಟೆಲ್ ನ ಆಡಳಿತ ಮಂಡಳಿಯಿಂದ ಮಾಹಿತಿ ಪಡೆಯಲಾಯಿತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಮೊಬಿಲಿಮ್ ನ  ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ ಎಂದು ಅಂಜುನಾ ಠಾಣೆಯ ಇನ್ಸ್ ಪೆಕ್ಟರ್ ನವಲೇಶ್ ದೇಸಾಯ್ ಹೇಳಿದ್ದಾರೆ.

ಸೈನಿ ಬಾಯ್ ಫ್ರೆಂಡ್  ತಲೆ ಮರೆಸಿಕೊಂಡಿದ್ದು, ಅಂಜುನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ತನಿಖೆ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com