ಪೌರತ್ವ ವಿವಾದ: 15 ದಿನಗಳಲ್ಲಿ ಉತ್ತರಿಸುವಂತೆ ರಾಹುಲ್ ಗಾಂಧಿಗೆ ಗೃಹ ಸಚಿವಾಲಯ ನೊಟೀಸ್

ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅವರಿಂದ ದೂರು ಸ್ವೀಕರಿಸಿದ ಗೃಹ ಸಚಿವಾಲಯ ಮಂಗಳವಾರ ನಾಗರಿಕತ್ವ ವಿವಾದಕ್ಕೆ ಸಂಬಂಧಪಟ್ಟಂತೆ...

Published: 30th April 2019 12:00 PM  |   Last Updated: 30th April 2019 01:13 AM   |  A+A-


Congress MP Rahul Gandhi

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ

Posted By : SUD SUD
Source : The New Indian Express
ನವದೆಹಲಿ: ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅವರಿಂದ ದೂರು ಸ್ವೀಕರಿಸಿದ ಗೃಹ ಸಚಿವಾಲಯ ಮಂಗಳವಾರ ನಾಗರಿಕತ್ವ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ನೊಟೀಸ್ ಜಾರಿ ಮಾಡಿದೆ.

ತಮ್ಮ ನಾಗರಿಕತ್ವಕ್ಕೆ ಸಂಬಂಧಪಟ್ಟಂತೆ ನೀಡಿರುವ ದೂರಿಗೆ ಸಂಬಂಧಿಸಿದಂತೆ ವಾಸ್ತವ ಸಂಗತಿಯನ್ನು ಇನ್ನು 15 ದಿನಗಳೊಳಗೆ ವಿವರಿಸುವಂತೆ ಗೃಹ ಸಚಿವಾಲಯ ರಾಹುಲ್ ಗಾಂಧಿಯವರಿಗೆ ಸೂಚಿಸಿದೆ.

ಗೃಹ ಸಚಿವಾಲಯ ಹೊರಡಿಸಿರುವ ಪತ್ರದಲ್ಲಿ, ಡಾ ಸುಬ್ರಹ್ಮಣ್ಯ ಸ್ವಾಮಿಯವರಿಂದ ಗೃಹ ಸಚಿವಾಲಯಕ್ಕೆ ಪತ್ರ ಬಂದಿದ್ದು ಬ್ಯಾಕೊಪ್ಸ್ ಲಿಮಿಟೆಡ್ ಎನ್ನುವ ಕಂಪೆನಿ 2003ರಲ್ಲಿ ಇಂಗ್ಲೆಂಡ್ ನಲ್ಲಿ ನೋಂದಣಿಯಾಗಿತ್ತು. 51ನೇ ಸೌತ್ ಗೇಟ್ ಸ್ಟ್ರೀಟ್, ವಿಂಚೆಸ್ಟರ್, ಹ್ಯಾಂಪ್ ಶೈರ್ ಎಸ್ಒ23 9ಇಎಚ್ ಎಂದು ವಿಳಾಸ ಬರೆದಿದ್ದು ಅದರ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ನೀವು ಕೂಡ ಒಬ್ಬರಾಗಿದ್ದೀರಿ ಎಂದು ಹೇಳುತ್ತದೆ ಎಂದು ಗೃಹ ಸಚಿವಾಲಯಕ್ಕೆ ಬಂದಿರುವ ಪತ್ರ ಹೇಳುತ್ತದೆ. ಬಿ ಸಿ.ಜೋಷಿ ನಾಗರಿಕತ್ವ ಇಲಾಖೆಯ ನಿರ್ದೇಶಕರು ಕಳುಹಿಸಿರುವ ಪತ್ರ ಇದಾಗಿದೆ.

ಕಂಪೆನಿ 2005 ಅಕ್ಟೋಬರ್ ನಿಂದ 2006ರ ಅಕ್ಟೋಬರ್ ವರೆಗೆ ವಾರ್ಷಿಕವಾಗಿ ಸಲ್ಲಿಸಿರುವ ಐಟಿ ಸಲ್ಲಿಕೆಯಲ್ಲಿ ರಾಹುಲ್ ಗಾಂಧಿಯವರ ಹುಟ್ಟಿದ ದಿನಾಂಕ 19/06/1970 ಎಂದು ನಮೂದಾಗಿದೆ. ಅಲ್ಲದೆ ತಾವು ಬ್ರಿಟನ್ ಪ್ರಜೆ ಎಂದು ಘೋಷಿಸಿದ್ದಾರೆ.

ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ 2015ರಿಂದಲೇ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂದು ಆರೋಪಿಸುತ್ತಾ ಬಂದಿದ್ದಾರೆ. 2016ರಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರ ಆರೋಪವನ್ನು ತಳ್ಳಿಹಾಕಿದ್ದ ರಾಹುಲ್ ಗಾಂಧಿ, ಸುಬ್ರಹ್ಮಣ್ಯ ಸ್ವಾಮಿಯವರು ತಮ್ಮ ಬಗ್ಗೆ ಸುಳ್ಳು ಆರೋಪ ಮಾಡಿ ದೇಶದ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಅವರಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp