ತೀವ್ರಗೊಂಡ ಫನಿ ಚಂಡಮಾರುತ, ಮೂರು ರಾಜ್ಯಗಳಲ್ಲಿ ಹೈ ಅಲರ್ಟ್!

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಫನಿ ಚಂಡಮಾರುತ ಸಮಯ ಕಳದಂತೆಯೇ ತನ್ನ ತೀವ್ರತೆ ಹೆಚ್ಚಿಸಿಕೊಂಡಿದ್ದು, ಇದೀಗ ದೇಶದ ಮೂರು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಫನಿ ಚಂಡಮಾರುತ
ಫನಿ ಚಂಡಮಾರುತ
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಫನಿ ಚಂಡಮಾರುತ ಸಮಯ ಕಳದಂತೆಯೇ ತನ್ನ ತೀವ್ರತೆ ಹೆಚ್ಚಿಸಿಕೊಂಡಿದ್ದು, ಇದೀಗ ದೇಶದ ಮೂರು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಒಡಿಶಾ ಕರಾವಳಿ ತೀರದತ್ತ ಧಾವಿಸುತ್ತಿರುವ ಫನಿ ಚಂಡಮಾರುತ, ಇಂದು ಸಂಜೆ ವೇಳೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈ ಮೂರು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈ ಮೂರು ರಾಜ್ಯಗಳ ಕರಾವಳಿ  ಪ್ರದೇಶಗಳಲ್ಲಿ ಎಸ್ ಡಿಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ತಂಡಗಳನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿಡಲಾಗಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿರುವಂತೆ ಹೇಳಲಾಗಿದೆ. ಅಲ್ಲದೆ ಕರಾವಳಿ ಭಾಗದ ನಿವಾಸಿಗಳಿಗೂ ಎಚ್ಚರಿಕೆ ರವಾನೆ ಮಾಡಲಾಗಿದೆ.
ಪ್ರಸ್ತುತ ಆಂಧ್ರ ಪ್ರದೇಶದ ಮಚಲೀ ಪಟ್ಟಣಂ ಸಮುದ್ರ ತೀರದಿಂದ ಸುಮಾರು 900 ಕಿಮೀ ದೂರದಲ್ಲಿ ಫನಿ ಚಂಡಮಾರುತವಿದ್ದು, ಇಂದು ರಾತ್ರಿ ವೇಳೆಗೆ ಚಂಡಮಾರುತ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಪ್ರಸ್ತುತ ಚಂಡಮಾರುತ ಪ್ರತೀ ಗಂಟೆಗೆ 16 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು, ಸಮುದ್ರ ತೀರ ಹತ್ತಿರವಾಗುತ್ತಿದ್ದಂತೆಯೇ ಅದರ ವೇಗ ಮತ್ತು ತೀವ್ರತೆ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಹೀಗಾಗಿ ಮುಂದಿನ 24 ಗಂಟೆಗಳಲ್ಲಿ ಒಡಿಶಾ, ಆಂದ್ರ ಪ್ರದೇಶ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ತೆಲಂಗಾಣ ಕರಾವಳಿಯಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನಾಲ್ಕು ರಾಜ್ಯಗಳಿಗೆ 1806 ಕೋಟಿ ನೆರವು
ಫನಿ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ ನಾಲ್ಕು ರಾಜ್ಯಗಳ ವಿಪತ್ತು ನಿಧಿಗೆ ಒಟ್ಟು 1806 ಕೋಟಿ ರೂಪಾಯಿ ನೀಡಿದೆ.  ಆಂಧ್ರ ಪ್ರದೇಶಕ್ಕೆ 200.25, ಓಡಿಶಾಗೆ 340.87, ತಮಿಳುನಾಡಿಗೆ 309.37, ಪಶ್ಚಿಮ ಬಂಗಾಳಗೆ 235.50 ಕೋಟಿ ರೂ. ಮಂಜೂರು ಮಾಡಿದೆ.  ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ರಾಜ್ಯಗಳ ವಿಪತ್ತು ನಿಧಿಗೆ ವರ್ಗಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com