ಇಂಡೋ-ಟಿಬೆಟ್ ಗಡಿಯಲ್ಲಿ ಕಾಣಿಸಿಕೊಂಡ ಹಿಮಮಾನವ, ಭಾರತೀಯ ಸೇನೆ ಹೇಳಿದ್ದೇನು?

ಇಂಡೋ-ಟಿಬೆಟ್ ಗಡಿಯಲ್ಲಿ ಇದೇ ಮೊದಲ ಬಾರಿಗೆ ಹಿಮ ಮಾನವನ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ವತಃ ಭಾರತೀಯ ಸೇನೆ ಫೋಟೋ ಸಮೇತ ಟ್ವೀಟ್ ಮಾಡಿದೆ.
ಸೇನೆ ಬಿಡುಗಡೆ ಮಾಡಿರುವ ಯೇತಿ ಹೆಜ್ಜೆ ಗುರುತು
ಸೇನೆ ಬಿಡುಗಡೆ ಮಾಡಿರುವ ಯೇತಿ ಹೆಜ್ಜೆ ಗುರುತು
ನವದೆಹಲಿ: ಇಂಡೋ-ಟಿಬೆಟ್ ಗಡಿಯಲ್ಲಿ ಇದೇ ಮೊದಲ ಬಾರಿಗೆ ಹಿಮ ಮಾನವನ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ವತಃ ಭಾರತೀಯ ಸೇನೆ ಫೋಟೋ ಸಮೇತ ಟ್ವೀಟ್ ಮಾಡಿದೆ.
ನೇಪಾಳದ ಮಕಲು ಬೇಸ್ ಕ್ಯಾಂಪ್ ನಲ್ಲಿ ಏಪ್ರಿಲ್ 9 ರಂದು ಈ ಹೆಜ್ಜೆ ಗುರುತು ಪತ್ತೆಯಾಗಿತ್ತು ಎಂದು ಎಡಿಜಿ ಪಿಐ-ಇಂಡಿಯನ್ ಆರ್ಮಿ ಟ್ವೀಟ್ ಮಾಡಿದೆ. ಭಾರತೀಯ ಸೇನೆಯ ಪರ್ವತಾರೋಹಿಗಳ ತಂಡವೊಂದು 'ಯೇತಿ' ಯ ಹೆಜ್ಜೆ ಗುರುತನ್ನು ಪತ್ತೆ ಮಾಡಿದೆ. ಸೇನೆ ನೀಡಿರುವ ಮಾಹಿತಿಯಂತೆ 32x15 ಇಂಚು ಅಳತೆಯ ಈ ಹೆಜ್ಜೆಗುರುತು ಪತ್ತೆಯಾಗಿದ್ದು, ಈ ಹೆಜ್ಜೆ ಗುರುತು ಯೇತಿಯದ್ದೇ ಎಂದು ಅಂದಾಜಿಸಲಾಗಿದ್ದು, ಕುತೂಹಲ ಸೃಷ್ಟಿಯಾಗಿದೆ. 
1921 ರಲ್ಲಿ ಲೆಫ್ಟಿನೆಂಟ್ - ಕರ್ನಲ್ ಚಾರ್ಲ್ಸ್ ಹೊವರ್ಡ್ - ಬುರಿ ನೇತೃತ್ವದಲ್ಲಿ ಅಲ್ಫಿನ್ ಕ್ಲಬ್ ಮತ್ತು ರಾಯಲ್ ಜಿಯಾಗ್ರಾಫಿಕಲ್ ಸೊಸೈಟಿ ಜಂಟಿಯಾಗಿ ಕೈಗೊಂಡಿದ್ದ ಎವರೆಸ್ಟ್ ಪರ್ವತಾರೋಹಣ ಯಾತ್ರೆಯಲ್ಲಿ ಈ ದೈತ್ಯ ಜೀವಿಯ ಅಸ್ತಿತ್ವವನ್ನು ಪತ್ತೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಯೇತಿಯ ಬಗ್ಗೆ ಕುತೂಹಲ ಸೃಷ್ಟಿಯಾಗಿದೆ. 
ಏನಿದು ಯೇತಿ?
ನೇಪಾಳ ಮತ್ತು ಟಿಬೆಟ್ ನ ಹಿಮಾಲಯದ ಪ್ರದೇಶದಲ್ಲಿ ವಾಸಿಸುವ ಆದಿವಾಸಿ ಹಿಮ ಮಾನವನನ್ನು ಯೇತಿ ಎಂದು ಕರೆಯಲಾಗುತ್ತದೆ. ಅದು ಇತಿಹಾಸದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿತ್ತು ಎನ್ನಲಾಗುತ್ತಿತ್ತಾದರೂ ವೈಜ್ಞಾನಿಕವಾಗಿ ಯೇತಿ ಅಸ್ತಿತ್ವದ ಬಗ್ಗೆ ಈಗಲೂ ಪ್ರಶ್ನೆಗಳಿವೆ. ಅದೊಂದು ಕಾಲ್ಪನಿಕ ಪಾತ್ರ ಎಂದೇ ಇಂದಿಗೂ ಬಹುತೇಕ ಜನರು ನಂಬಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com