ಶ್ರೀಲಂಕಾ ಸ್ಫೋಟಕ್ಕೆ ಜಾಕಿರ್ ನಾಯಕ್ ನಂಟು: ಎನ್ಐಎ ತನಿಖೆಯಲ್ಲಿ ಬಹಿರಂಗ

ಶ್ರೀಲಂಕಾ ಸ್ಫೋಟಕ್ಕೂ, ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಗೂ ನಂಟಿರುವುದು ಎನ್ಐಎ ತನಿಖೆಯಿಂದ ಬಹಿರಂಗಗೊಂಡಿದೆ.

Published: 30th April 2019 12:00 PM  |   Last Updated: 30th April 2019 01:11 AM   |  A+A-


NIA raids in Kerala reveal Zakir Naik's link to Sri Lanka blasts

ಶ್ರೀಲಂಕಾ ಸ್ಫೋಟಕ್ಕೆ ಜಾಕಿರ್ ನಾಯಕ್ ನಂಟು: ಎನ್ಐಎ ತನಿಖೆಯಲ್ಲಿ ಬಹಿರಂಗ

Posted By : SBV SBV
Source : IANS
ನವದೆಹಲಿ: ಶ್ರೀಲಂಕಾ ಸ್ಫೋಟಕ್ಕೂ, ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಗೂ ನಂಟಿರುವುದು ಎನ್ಐಎ ತನಿಖೆಯಿಂದ ಬಹಿರಂಗಗೊಂಡಿದೆ. 

ಎನ್ಐಎ ತಂಡ ಕೇರಳದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಬೆಂಬಲಿಗ ರಿಯಾಸ್ ಅಬೂಬಕರ್ ನ್ನು ಬಂಧಿಸಿದೆ. ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ಸ್ಫೋಟ ನಡೆಸಿದ್ದ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಝಹ್ರಾನ್‌ ಹಶೀಮ್‌ ಎಂಬ ಉಗ್ರನ ಭಾಷಣ ಹಾಗೂ ವಿಡಿಯೋಗಳನ್ನು ರಿಯಾಸ್ ಅಬೂಬಕರ್ ಒಂದು ವರ್ಷದಿಂದ ಕೇಳುತ್ತಿದ್ದ. 

ಎನ್ಐಎ ನೀಡಿರುವ ಮಾಹಿತಿಯ ಪ್ರಕಾರ ರಿಯಾಸ್ ಅಬೂಬಕರ್, ತಾನು ಝಾಕಿರ್ ನಾಯಕ್ ಅವರ ಭಾಷಣಗಳನ್ನೂ ಕೇಳಿ ಪ್ರಭಾವಿತಗೊಂಡು, ಕೇರಳದಲ್ಲಿ ಆತ್ಮಾಹತ್ಯಾ ಬಾಂಬ್ ಸ್ಫೋಟ ನಡೆಸಲು ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp