ಶರದಾ ಹಗರಣ: ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತರ ವಿರುದ್ಧ ಸಿಬಿಐನಿಂದ 'ವಿಶ್ವಾಸಾರ್ಹ' ಸಾಕ್ಷಿ ಕೇಳಿದ 'ಸುಪ್ರೀಂ'

ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಶರದಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಕೋಲ್ತತಾ ಮಾಜಿ ಪೊಲೀಸ್ ಆಯುಕ್ತರ ವಿರುದ್ಧ 'ವಿಶ್ವಾಸಾರ್ಹ' ಸಾಕ್ಷಿಗಳನ್ನು ಸಲ್ಲಿಕೆ ಮಾಡುವಂತೆ ಸಿಬಿಐಗೆ ಸೂಚನೆ ನೀಡಿದೆ.

Published: 30th April 2019 12:00 PM  |   Last Updated: 30th April 2019 03:22 AM   |  A+A-


Saradha Scam: SC seeks credible evidence from CBI against ex-Kolkata top cop Rajeev Kumar

ಸಂಗ್ರಹ ಚಿತ್ರ

Posted By : SVN SVN
Source : The New Indian Express
ನವದೆಹಲಿ: ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಶರದಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಕೋಲ್ತತಾ ಮಾಜಿ ಪೊಲೀಸ್ ಆಯುಕ್ತರ ವಿರುದ್ಧ 'ವಿಶ್ವಾಸಾರ್ಹ' ಸಾಕ್ಷಿಗಳನ್ನು ಸಲ್ಲಿಕೆ ಮಾಡುವಂತೆ ಸಿಬಿಐಗೆ ಸೂಚನೆ ನೀಡಿದೆ.

ಈ ಬಗ್ಗೆ ಇಂದು ನಡೆದ ವಿಚಾರಣೆಯಲ್ಲಿ ಇಂತಹುದೊಂದು ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಪೀಠ ಸಿಬಿಐಗೆ ನೀಡಿದ್ದು, ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನುಪೊಲೀಸ್ ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸಲು ಅವರ ವಿರುದ್ಧ ಇರುವ 'ವಿಶ್ವಾಸಾರ್ಹ' ಸಾಕ್ಷಿಗಳನ್ನು ಸಲ್ಲಿಕೆ ಮಾಡಿ ಎಂದು ಸೂಚನೆ ನೀಡಿದೆ.

ಅಂತೆಯೇ ಹಗರದಣಲ್ಲಿ ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಅವರ ಪಾತ್ರದ ಕುರಿತು ಸಿಬಿಐ ಸಾಬೀತು ಮಾಡುಬೇಕು. ಆ ಬಳಿಕವಷ್ಟೇ ಅವರನ್ನು ಪೊಲೀಸ್ ವಶಕ್ಕೆ ನೀಡಿ ವಿಚಾರಣೆಗೆ ಅವಕಾಶ ನೀಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಅಂತೆಯೇ ಪ್ರಕರಣಕ್ಕೆ ಸಂಬಂಧಪಟ್ಟ ಹಾರ್ಡ್ ಡಿಸ್ತ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಗಳು ಮತ್ತಿತರೆ ವಸ್ತುಗಳನ್ನು ಸಾಕ್ಷಿ ನೀಡಬೇಕು ಎಂದು ಸೂಚಿಸಿದೆ.

ಇನ್ನು ಈ ಹಿಂದೆ ಶರದಾ ಹಗರಣದಲ್ಲಿ ಅಂದಿನ ಕೋಲ್ಕತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ಪಾತ್ರವಿದೆ ಎಂದು ಆರೋಪಿಸಿದ್ದ ಸಿಬಿಐ, ರಾಜೀವ್ ಕುಮಾರ್ ಹಗರದಣ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು ಎಂದು ಆರೋಪಿಸಿತ್ತು. ಇದೇ ಕಾರಣಕ್ಕೆ  ರಾಜೀವ್ ಕುಮಾರ್ ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದ್ದ ಸಿಬಿಐಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅಡ್ಡಿಯಾಗಿ ನಿಂತಿದ್ದರು. ಅಂದು ಕೋಲ್ಕತಾದಲ್ಲಿ ರಾಜೀವ್ ಕುಮಾರ್ ಅವರ ಬಂಧನಕ್ಕೆ ಆಗಮಿಸಿದ್ದ ಸಿಬಿಐ ಅಧಿಕಾರಿಗಳನ್ನೇ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು. ಆ ಮೂಲಕ ದೊಡ್ಡ ಹೈಡ್ರಾಮ ನಡೆದಿತ್ತು. ಅಲ್ಲದೆ ಅಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ಮತ್ತು ಸಿಬಿಐ ವಿರುದ್ಧ ಸಾರ್ವಜನಿಕವಾಗಿ ಅಹೋ ರಾತ್ರಿ ಪ್ರತಿಭಟನೆ ಕೂಡ ನಡೆಸಿದ್ದರು. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp