ವಿಶ್ವದ ವೈದ್ಯಲೋಕದಲ್ಲೆ ಮೊದಲ ಅಚ್ಚರಿ: ಬಾಲಕನ ಬಾಯಲ್ಲಿತ್ತು ಬರೋಬ್ಬರೀ 526 ಹಲ್ಲುಗಳು!

ನಗರದ ಸವಿತಾ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಿದ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಏಳು ವರ್ಷದ ಬಾಲಕನ ಬಾಯಿಂದ ವೈದ್ಯರು 526 ಹಲ್ಲುಗಳನ್ನು ಹೊರತೆಗೆದಿದ್ದಾರೆ.

Published: 01st August 2019 12:00 PM  |   Last Updated: 01st August 2019 02:03 AM   |  A+A-


526 Teeth Extracted From 7-Year-Old's Mouth By Chennai Doctors

ಬಾಲಕನ ಬಾಯಿಂದ ಹೊರ ತೆಗೆದ ಹಲ್ಲುಗಳು

Posted By : SD SD
Source : Online Desk
ಚೆನ್ನೈ: ನಗರದ ಸವಿತಾ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಿದ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಏಳು ವರ್ಷದ ಬಾಲಕನ ಬಾಯಿಂದ ವೈದ್ಯರು 526 ಹಲ್ಲುಗಳನ್ನು ಹೊರತೆಗೆದಿದ್ದಾರೆ.

7 ವರ್ಷದ ಬಾಲಕ ರವೀಂದ್ರನಾಥ್‌ನ ಬಾಯಿಯಲ್ಲಿದ್ದ ಬರೊಬ್ಬರಿ 526 ಹಲ್ಲುಗಳು ಕಂಡು ಬಂದಿದೆ. ಇದನ್ನು ವೈದ್ಯರು ಆಪರೇಷನ್‌ ಮೂಲಕ ಹೊರ ತೆಗೆದಿದ್ದು, ಬಾಲಕ ಚೇತರಿಸಿಕೊಂಡಿದ್ದಾನೆ. 

ವಿಶ್ವದಲ್ಲೇ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಕೆಳಗಿನ ಬಲ ದವಡೆಯಲ್ಲಿ ಉಂಟಾದ ಊತದಿಂದಾಗಿ ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮ್ ಎಂಬ ಅಪರೂಪದ ಪ್ರಕರಣದಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು

ಬಾಲಕ ಮೂರು ವರ್ಷದವನಿರುವಾಗಲೇ ಬಾಯಿ ಊದಿಕೊಂಡಿತ್ತು. ಆದರೆ ಬಾಲಕನ ಪೋಷಕರು ಬಾಲಕನ ಬಾಯಿಯ ಕುರಿತಾಗಿ ಅಷ್ಟೊಂದು ತಲೆ ಕಡೆಸಿಕೊಂಡಿರಲಿಲ್ಲ. ಬಾಯಿಯನ್ನು ಪರೀಕ್ಷಿಸಲು ಮುಂದಾದಾಗ ಪುಟ್ಟ ಬಾಲಕ ನೋವಿನಿಂದ ಜೋರಾಗಿ ಅಳುತ್ತಿದ್ದ. ಹೀಗಾಗಿ ಪೋಷಕರು ಅದನ್ನು ಗುಣ ಪಡಿಸುವತ್ತ ಮನಸ್ಸು ಮಾಡಲಿಲ್ಲ. 

ಆದರೆ ಕ್ರಮೆಣ ಊತ ಹೆಚ್ಚಾಗುತ್ತಿದ್ದಂತೆ ಪೋಷಕರು ಎಚ್ಚೆತ್ತುಕೊಂಡಿದ್ದಾರೆ.
ಎಕ್ಸ್‌ ಎಕ್ಸ್‌ ರೇ ಬಳಿಕ ಪತ್ತೆ ಎಕ್ಸ್‌ ರೇ ಮತ್ತು ಸಿಟಿ ಸ್ಕ್ಯಾನ್‌ ಮಾಡಿದಾಗ ಕೆಳಭಾಗದ ಬಲ ದವಡೆಯಲ್ಲಿ ಹಲ್ಲುಗಳು ಹೆಚ್ಚಿರುವುದು ಪತ್ತೆಯಾಗಿದೆ. 

ಬಾಲಕನಿಗೆ ಅರಿವಳಿಕೆ (ಅನಸ್ತೇಶಿಯಾ) ನೀಡಿ ದವಡೆಯನ್ನು ತೆರೆಯಲಾಯಿತು. ಅಲ್ಲಿ ಸುಮಾರು 200 ಗ್ರಾಂ. ತೂಕವಿರುವ ಒಂದು ಹಲ್ಲಿನ ಬ್ಯಾಗ್‌ ಪತ್ತೆಯಾಗಿತ್ತು. ಬಳಿಕ ಅವುಗಳನ್ನು ಹೊರ ತೆಗೆಯಲಾಗಿದೆ. ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ 526 ಹಲ್ಲುಗಳು ಅದರಲ್ಲಿದ್ದವು.

ಕೆಲವು ಬಹಳ ಸಣ್ಣ ಕಣಗಳಾಗಿದ್ದರೂ, ಅವುಗಳಲ್ಲಿ ಹಲ್ಲುಗಳ ಗುಣಗಳಿವೆ. ಆ ಚೀಲದಿಂದ ಎಲ್ಲಾ ಹಲ್ಲುಗಳನ್ನು ಹೊರತೆಗೆಯಲು 5 ಗಂಟೆಗಳೇ ಬೇಕಾದವು. ಶಸ್ತ್ರ ಚಿಕಿತ್ಸೆ ಬಳಿಕ ಹುಡುಗ ಆರಾಮವಾಗಿದ್ದಾನೆ. ಈ ರೀತಿಯ ಪ್ರಕರಣ ವಿಶ್ವದಲ್ಲೇ ಮೊದಲನೆಯದು ಎಂದು ವೈದ್ಯರು ತಿಳಿಸಿದ್ದಾರೆ. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp