2018-19ರ ಅವಧಿಯಲ್ಲಿ ಭಾರತಕ್ಕೆ ಗರಿಷ್ಠ ಪ್ರಮಾಣದ ವಿದೇಶ ನೇರ ಹೂಡಿಕೆ: ಕೇಂದ್ರ ಸರ್ಕಾರ

2018-19ರ ಅವಧಿಯಲ್ಲಿ ಭಾರತ ದೇಶ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 2018-19ರ ಅವಧಿಯಲ್ಲಿ ಭಾರತ ದೇಶ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜನಾ ಇಲಾಖೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ವಿದೇಶಿ ನೇರ ಹೂಡಿಕೆ ನೀತಿ, ಉದಾರೀಕರಣ ಮತ್ತು ಸುಧಾರಣೆಗಳ (Department for Promotion of Industry and Internal Trade-DPIIT)) ಪರಿಣಾಮ 2018-19 ವಿತ್ತೀಯ ವರ್ಷದಲ್ಲಿ 64.37 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ ದೇಶಕ್ಕೆ ಹರಿದು ಬಂದಿದೆ ಎಂದು ಹೇಳಿದೆ. 
ಈ ಹಿಂದಿನ ವಿತ್ತೀಯ ವರ್ಷದಲ್ಲಿ ಭಾರತ 60.97 ಬಿಲಿಯನ್ ಡಾಲರ್ ಹಣ ಭಾರತಕ್ಕೆ ಎಫ್ ಡಿಐ ಮೂಲಕ ಹರಿದು ಬಂದಿತ್ತು. ಇದು ಈ ವರೆಗಿನ ಗರಿಷ್ಟ ಎಫ್ ಡಿಐ ಹೂಡಿಕೆಯಾಗಿತ್ತು. ಆದರೆ 2018-19ರಲ್ಲಿ ಇದನ್ನೂ ಮೀರಿದ ಗರಿಷ್ಠ ಪ್ರಮಾಣದ ವಿದೇಶಿ ನೇರ ಹೂಡಿಕೆ ಹರಿದು ಬಂದಿದೆ ಎಂದು ಹೇಳಿದೆ. ಅಂತೆಯೇ ಕಳೆದ ಐದು ವರ್ಷಗಳಲ್ಲಿ ಭಾರತಕ್ಕೆ ಬಂದಿರುವ ವಿದೇಶಿ ನೇರ ಹೂಡಿಕೆ ಪ್ರಮಾಣ 286 ಬಿಲಿಯನ್ ಡಾಲರ್ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಂತೆಯೇ ಕೇವಲ ವಿದೇಶಿ ನೇರ ಹೂಡಿಕೆ ಮಾತ್ರವಲ್ಲದೇ ಅದರ ಮೂಲಕ ಭಾರತಕ್ಕೆ ಉದ್ಯಮ ವಲಯದ ಅತ್ಯಾಧುನಿಕ ತಂತ್ರಜ್ಞಾನಗಳೂ ಕೂಡ ಆಗಮಿಸಿದ್ದು, ಇನ್ನೂ ಸಾಕಷ್ಟು ವಿನೂತನ ತಂತ್ರಜ್ಞಾನಗಳು ಭಾರತದಲ್ಲಿ ಆವಿಷ್ಕಾರಗೊಳ್ಳುತ್ತಿವೆ. ಆ ಮೂಲಕ ಭಾರತದ ಆರ್ಥಿಕತೆ ಅಭಿವೃದ್ಧಿಗೆ ವೇಗ ನೀಡಲಿವೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. 
1995ರಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯನ್ನು ಆರಂಭಿಸಿತ್ತು. ಆ ಬಳಿಕ 2000ರಲ್ಲಿ  ಈ ಇಲಾಖೆಗೆ ಕಾಯಕಲ್ಪ ನೀಡಿ ಕೈಗಾರಿಕಾ ಅಭಿವೃದ್ಧಿ ಇಲಾಖೆಯೊಂದಿಗೆ ವಿಲೀನ ಮಾಡಲಾಯಿತು. ಈ ಹಿಂದೆ ಇದೇ ಇಲಾಖೆಯನ್ನು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ ಎಂದು ಕರೆಯಲಾಗುತ್ತಿತ್ತು. ಇದೀಗ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ ಎಂದು ಮರು ನಾಮಕರಣ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com