ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಗಲ್ಲು ಶಿಕ್ಷೆ: ಲೋಕಸಭೆಯಲ್ಲಿ ಹೊಸ ಪೋಕ್ಸೊ ವಿಧೇಯಕ ಅಂಗೀಕಾರ

ಮಕ್ಕಳ ಮೇಲಿನ ಹೀನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನನ್ನು ಒಳಗೊಂಡಿರುವ 'ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೋ)...
ಸ್ಮೃತಿ ಇರಾನಿ
ಸ್ಮೃತಿ ಇರಾನಿ
ನವದೆಹಲಿ: ಮಕ್ಕಳ ಮೇಲಿನ ಹೀನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಕಾನೂನನ್ನು ಒಳಗೊಂಡಿರುವ 'ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೋ)' ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
ಇದು ಅಪ್ರಾಪ್ತರ ವಿರುದ್ಧದ ಇತರ ಅಪರಾಧಗಳಿಗೂ ಕಠಿಣ ಶಿಕ್ಷೆ ನೀಡುವ ಅಂಶಗಳನ್ನು ಒಳಗೊಂಡಿದೆ. ಮಸೂದೆ ಮಂಡಿಸಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ, ಈ ಕರಡು ಪ್ರತಿಯಿಂದ ದೇಶದ 47 ಕೋಟಿ ಜನರು ರಕ್ಷಣೆ ಪಡೆಯಲಿದ್ದಾರೆ. ಕರಡು ಮಸೂದೆಯನ್ನು ಈಗಾಗಲೇ ರಾಜ್ಯಸಭೆ ಅಂಗೀಕರಿಸಿದೆ. ಈ ತಿದ್ದುಪಡಿ ಭಾರತೀಯ ದಂಡ ಸಂಹಿತೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲಿದೆ ಎಂದರು.
ಪೋಕ್ಸೋ ಕಾಯ್ದೆ ಲಿಂಗಭೇದವಿಲ್ಲದೆ ಅಪ್ರಾಪ್ತ ಮಕ್ಕಳ ಮೇಲಿನ ಅಪರಾಧಗಳಿಗೆ ಶಿಕ್ಷ ಒದಗಿಸುತ್ತದೆ. ಇದು ಮಕ್ಕಳ ಅಶ್ಲೀಲ ಚಿತ್ರಗಳಿಗೆ ದಂಡ ಹಾಗೂ ಶಿಕ್ಷೆಯನ್ನು ವಿಧಿಸುತ್ತದೆ. ಇಂದಿನ ಸಮಾಜದಲ್ಲಿ ಇಂತಹ ಮಸೂದೆ ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com