ಉನ್ನವ್ ಅತ್ಯಾಚಾರ ಸಂತ್ರಸ್ತೆ ಅಪಘಾತ: ತನಿಖೆಗೆ ಸಿಬಿಐ ಹೊಸ ತಂಡ ರಚನೆ

ಉನ್ನವ್ ಅತ್ಯಾಚಾರ ಸಂತ್ರಸ್ತೆ ಅಪಘಾತ ಪ್ರಕರಣದ ತನಿಖೆಗಾಗಿ ಸಿಬಿಐ 20 ಸದಸ್ಯರನ್ನೊಳಗೊಂಡ ಹೆಚ್ಚುವರಿ ವಿಶೇಷ ತಂಡವನ್ನು ರಚಿಸಿದೆ ಎಂದು ತನಿಖಾ ಸಂಸ್ಥೆಯ ವಕ್ತಾರರು ಇಂದು ತಿಳಿಸಿದ್ದಾರೆ.

Published: 02nd August 2019 12:00 PM  |   Last Updated: 02nd August 2019 07:12 AM   |  A+A-


Accident spot

ಅಪಘಾತ ಸಂಭವಿಸಿದ ಸ್ಥಳ

Posted By : ABN ABN
Source : PTI
ನವದೆಹಲಿ: ಉನ್ನವ್ ಅತ್ಯಾಚಾರ ಸಂತ್ರಸ್ತೆ ಅಪಘಾತ ಪ್ರಕರಣದ ತನಿಖೆಗಾಗಿ ಸಿಬಿಐ 20 ಸದಸ್ಯರನ್ನೊಳಗೊಂಡ ಹೆಚ್ಚುವರಿ ವಿಶೇಷ  ತಂಡವನ್ನು ರಚಿಸಿದೆ ಎಂದು ತನಿಖಾ ಸಂಸ್ಥೆಯ ವಕ್ತಾರರು ಇಂದು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ ಕೇಂದ್ರಿಯ ವಿಧಿ ವಿಜ್ಞಾನ ಪ್ರಯೋಗಾಲಯದ ಆರು ಉನ್ನತ ತಜ್ಞರು ಅಪಘಾತ ನಡೆದ ಸ್ಥಳಕ್ಕೆ ಈಗಾಗಲೇ ತೆರಳಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾನುವಾರ ಸಂತ್ರಸ್ತೆ ಸ್ವೀಪ್ಟ್ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಇದೇ ರೀತಿಯಲ್ಲಿ ಸ್ವೀಪ್ಟ್ ಕಾರಿನಲ್ಲಿ ವಿಧಿ ವಿಜ್ಞಾನ ತಜ್ಞರ ತಂಡ ತೆರಳಿದ್ದು, ಅಪಘಾತದ ದೃಶ್ಯವನ್ನು ಮರು ಸೃಷ್ಟಿಸಲಾಗುತ್ತಿದೆ.

20 ಮಂದಿ ಸದಸ್ಯರನ್ನೊಳಗೊಂಡ ವಿಶೇಷ ತಂಡಕ್ಕೆ ಐವರು ಸದಸ್ಯರ ತಂಡ ಸಹಾಯಕರಾಗಿ ಕೆಲಸ ಮಾಡಲಿದ್ದಾರೆ . ಈ ತಂಡ ಈಗಾಗಲೇ ತನಿಖೆ ಆರಂಭಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp