ಜಮ್ಮು- ಕಾಶ್ಮೀರ: ಶೂಪಿಯಾನ್ ಎನ್ ಕೌಂಟರ್, ಉಗ್ರನ ಹತ್ಯೆ

ಜಮ್ಮು- ಕಾಶ್ಮೀರದ ಶೂಪಿಯನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಆತಂಕವಾದಿಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಉಗ್ರನೋರ್ವನ ಹತ್ಯೆಯಾಗಿದೆ. ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಸೇನೆ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಶ್ರೀನಗರ:  ಜಮ್ಮು- ಕಾಶ್ಮೀರದ ಶೂಪಿಯನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಆತಂಕವಾದಿಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಉಗ್ರನೋರ್ವನ ಹತ್ಯೆಯಾಗಿದೆ. ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಸೇನೆ ಹೇಳಿದೆ.
ಉಗ್ರರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರ ಜಿಲ್ಲೆಯ ಪಾಂದೊಶಾನ್ ಪ್ರದೇಶದಲ್ಲಿ ಕಾರ್ಡೊನ್ ಹಾಗೂ ಶೋಧ  ಕಾರ್ಯಾಚರಣೆ ನಡೆಸಲಾಗುತಿತ್ತು. ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಪ್ರತಿದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆಯಲ್ಲಿ ಶೂಪಿಯಾನ್  ಮೆಮೆಂದರ್ ಪ್ರದೇಶದ ನಿವಾಸಿ ಜೀನಾತ್ -ಉಲ್- ಇಸ್ಲಾಂ ಸಂಘಟನೆಯ ಉಗ್ರನನ್ನು ಹತ್ಯೆಗೈಯಲಾಗಿದ್ದು, ಭಾರತೀಯ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳದಲ್ಲಿದ್ದ ಯುದ್ದೋಪಕರಣ ರೀತಿಯ ಸಶಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com