ಯೋಧರ ಪಾಲಿನ ತಾಯಿ, ಅಬ್ದುಲ್ ಹಮೀದ್ ಪತ್ನಿ ರಸೂಲನ್ ಬೀಬಿ ನಿಧನ

1965ರ ಭಾರತ -ಪಾಕ್ ಯುದ್ಧದಲ್ಲಿ ದೇಶಕ್ಕೆ ಜಯ ತಂದು ಕೊಡಲು ಕಾರಣವಾಗಿದ್ದ, ಪರಮ ವೀರ ಚಕ್ರ ಪದಕ ಪಡೆದಿದ್ದ, ಯೋಧರ ಪಾಲಿಗೆ.....
ರಸೂಲನ್ ಬೀಬಿ
ರಸೂಲನ್ ಬೀಬಿ
ಗಾಜಿಪುರ: 1965ರ ಭಾರತ  -ಪಾಕ್ ಯುದ್ಧದಲ್ಲಿ ದೇಶಕ್ಕೆ  ಜಯ ತಂದು ಕೊಡಲು ಕಾರಣವಾಗಿದ್ದ, ಪರಮ ವೀರ ಚಕ್ರ ಪದಕ ಪಡೆದಿದ್ದ, ಯೋಧರ ಪಾಲಿಗೆ ಒಂದು ರೀತಿ ತಾಯಿಯೇ ಆಗಿದ್ದ ಹಮೀದ್ ಅವರ ಪತ್ನಿ ರಸೂಲನ್ ಬೀಬಿ, ದೀರ್ಘಕಾಲದ ಅನಾರೋಗ್ಯದ ನಂತರ ಶುಕ್ರವಾರ ನಿಧನರಾದರು.
ರಸೂಲನ್ ಬೀಬಿ ಅವರಿಗೆ ಸುಮಾರು 95 ವರ್ಷವಯಸ್ಸಾಗಿತ್ತು. ಅವರು ಜಿಲ್ಲೆಯ  ಧಮುಪುರ ಗ್ರಾಮದ  ಮನೆಯಲ್ಲಿ ಶುಕ್ರವಾರ ನಿಧನರಾದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
2017ರಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು  52ನೇ ಹುತಾತ್ಮರ ಸಂಭ್ರಮಾಚರಣೆಯ ಸಮಯದಲ್ಲಿ ಅಬ್ದುಲ್ ಹಮೀದ್ ಸ್ಮಾರಕ ಉದ್ಘಾಟಿಸಲು ಧಮುಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ನಂತರ ಅವರು ರಸೂಲನ್ ಬೀಬಿಯ ಪಾದ ಮುಟ್ಟಿ ನಮಸ್ಕರಿಸಿದ್ದರು. ಅಲ್ಲದೆ ಆಕೆಯನ್ನು ತಾಯಿಯಂತೆ ಎಂದೂ ಬಣ್ಣಿಸಿದ್ದರು.
2013ರಲ್ಲಿ ರಸೂಲನ್ ಬೀಬಿ ಅವರು ಗುಜರಾತಿನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಅಹಮದಾಬಾದಿಗೂ ಸಹ ಪ್ರಯಾಣ ಬೆಳೆಸಿದ್ದರು. 
ಅನೇಕ  ಹಿರಿಯ ರಾಜಕೀಯ ಮುಖಂಡರು ರಸೂಲನ್ ಬೀಬಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com