ಮಹಾಭಾರತ ಯುದ್ಧಕ್ಕೆ ಮುನ್ನವೂ ಸಂಧಾನ ಪ್ರಯತ್ನ ನಡೆದಿತ್ತು: ಯೋಗಿ ಆದಿತ್ಯನಾಥ್

ಬಹುದೀರ್ಘಕಾಲದ ಅಯೋಧ್ಯೆ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನಿಂಡ ರಚನೆಯಾಗಿದ್ದ ಸಂಧಾನ ಸಮಿತಿ ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿದೆ ಎನ್ನುವುದನ್ನು....
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಲಖನೌ: ಬಹುದೀರ್ಘಕಾಲದ ಅಯೋಧ್ಯೆ ರಾಮಜನ್ಮಭೂಮಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನಿಂಡ ರಚನೆಯಾಗಿದ್ದ ಸಂಧಾನ ಸಮಿತಿ ಅಂತಿಮ ತೀರ್ಮಾನಕ್ಕೆ ಬರಲು ವಿಫಲವಾಗಿದೆ ಎನ್ನುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಚಿತಪಡಿಸಿದ್ದಾರೆ. ಆದರೆ ಮೂವರನ್ನೊಳಗೊಂಡ ಈ ಸಂಧಾನ ಸಮಿತಿಯ ಪ್ರಯತ್ನವನ್ನು ಅವರು ಶ್ಲಾಘಿಸಿದ್ದಾರೆ.
ಹಿಂದೂ ಪುರಾಣ ಮಹಾಭಾರತದ ಉದಾಹರಣೆಯನ್ನು ಹೇ:ಳಿರುವ ಯೋಗಿ "ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗಾಗಿ ಮೂರು ಸದಸ್ಯರ ತಂಡವನ್ನು ರಚಿಸಿತ್ತು. ಅದು ವಿಫಲವಾಗಿದೆ. ಆದರೆ ನನಗೆ ಈ ಮಧ್ಯಸ್ಥಿಕೆಯಿಂದ ಏನೂ ಪ್ರಯೋಜನವಿಲ್ಲ ಎನ್ನುವುದು ತಿಳಿದಿತ್ತು.ಆದರೆ ಈ ಪ್ರಯತ್ನ ಬಹಳ ಒಳ್ಳೆಯದು. ಮಹಾಭಾರತ ಯುದ್ಧಕ್ಕೂ ಮುನ್ನ ಸಹ ಇಂತಹಾ ಒಂದು ಸಂಧಾನ ನಡೆದಿದ್ದು ಅಲ್ಲಿಯೂ ಸಹ ಅದು ಫಲಕಂಡಿರಲಿಲ್ಲ" ಎಂದಿದ್ದಾರೆ.
ಅಯೋಧ್ಯೆ ವಿಷಯದ ಮಧ್ಯಸ್ಥಿಕೆ ಸಮಿತಿಯು ಭೂವಿವಾದ ವಿಚಾರಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.ಮತ್ತು ಆಗಸ್ಟ್ 6 ರಿಂದ ಈ ಪ್ರಕರಣ ಕುರಿತಂತೆ ಪ್ರತಿನಿತ್ಯ ವಿಚಾರಣೆ ನಡೆಸಲು ತೀರ್ಮಾನಿಸಿದೆ. ಸಂವಿಧಾನ ಪೀಠದ ಮುಖ್ಯಸ್ಥರಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, "ನಾವು ಮಧ್ಯಸ್ಥಿಕೆ ವರದಿಯನ್ನು ಸ್ವೀಕರಿಸಿದ್ದೇವೆ. ಮಧ್ಯಸ್ಥಿಕೆ ಸಮಿತಿಯು ಯಾವುದೇ ಅಂತಿಮತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಪ್ರಕರಣದ ವಿಚಾರಣೆಯುಆ. 6ರಿಂದ ನಿತ್ಯವೂ ನಡೆಯಲಿದೆ." ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com