ಜನ್ಮದಿನದಂದೇ ಯುವತಿ ಅಪಹರಣ, ಗ್ಯಾಂಗ್ ರೇಪ್!

ಜನ್ಮದಿನದ ಸಂಭ್ರಮದಲ್ಲಿದ್ದ 19 ವರ್ಷದ ಯುವತಿಯನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Published: 03rd August 2019 12:00 PM  |   Last Updated: 03rd August 2019 01:12 AM   |  A+A-


Woman, 19, Allegedly Raped By 4 Men On Her Birthday in Mumbai

ಸಾಂದರ್ಭಿಕ ಚಿತ್ರ

Posted By : SVN SVN
Source : ANI
ಮುಂಬೈ: ಜನ್ಮದಿನದ ಸಂಭ್ರಮದಲ್ಲಿದ್ದ 19 ವರ್ಷದ ಯುವತಿಯನ್ನು ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಳೆದ ಜುಲೈ 7ರಂದು ತನ್ನ ಜನ್ಮದಿನದ ಸಂಭ್ರಮದಲ್ಲಿದ್ದ ಯುವತಿ ಸ್ನೇಹಿತೆಯ ಮನೆಗೆ ತೆರಳಿ ವಾಪಸಾಗುತ್ತಿದ್ದಳು. ಈ ವೇಳೆ ಯುವತಿಯನ್ನು ಹಿಂಬಾಲಿಸಿದ್ದ ನಾಲ್ಕು ಮಂದಿ ದುಷ್ಕರ್ಮಿಗಳು ಸಮಯ ನೋಡಿ ಆಕೆಯನ್ನು ಅಪಹರಣ ಮಾಡಿದ್ದಾರೆ.

ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾರೆ. ಬಳಿಕ ಯುವತಿ ಆಘಾತದಿಂದ ಮನೆಗೆ ತೆರಳಿದ್ದು, ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ. ಅತ್ಯಾಚಾರ ನಡೆದ ದಿನದಿಂದ ನಿತ್ಯವೂ ಆಕೆ ಗೌಪ್ಯವಾಗಿ ಅಳುತಿದ್ದಳು. ಇದನ್ನು ಗಮನಿಸಿದ ಪೋಷಕರು ಆಕೆಯನ್ನು ಸಾಕಷ್ಟು ಬಾರಿ ಪ್ರಶ್ನೆ ಮಾಡಿದ್ದರಾದರೂ, ಆಕೆ ಉತ್ತರಿಸಿರಲಿಲ್ಲ. ಕೊನೆಗೆ ಆಕೆಯ ಪರಿಸ್ಥಿತಿ ಗಮನಿಸಿದ ತಾಯಿ ಬಲವಂತ ಮಾಡಿದಾಗ ಯುವತಿ ನಡೆದ ವಿಷಯ ತಿಳಿಸಿದ್ದಾಳೆ. 

ಕೂಡಲೇ ಯುವತಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಚುನಭಟ್ಟಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ದೀಪಕ್ ವಿಜಯ್ ಸುರ್ವೆ ಅವರು ಐಪಿಸಿ ಸೆಕ್ಷನ್ 376 (ಅತ್ಯಾಚಾರ), 376D (ಸಾಮೂಹಿಕ ಅತ್ಯಾಚಾರ) and 34 (ಸಾಮಾನ್ಯ ಉದ್ದೇಶದೊಂದಿಗೆ ಹಲವಾರು ವ್ಯಕ್ತಿಗಳು ಮಾಡಿದ ಅಪರಾಧ ಕೃತ್ಯಗಳು) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂತೆಯೇ ಸಂತ್ರಸ್ಥ ಯುವತಿಯನ್ನು ಔರಂಗಾಬಾದ್ ಆಸ್ಪತ್ರೆಗೆ ರವಾನೆ ಮಾಡಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಈ ವೇಳೆ ಸಾಮೂಹಿಕ ಅತ್ಯಾಚಾರ ಗೈದಿರುವುದು ಸ್ಪಷ್ಟವಾಗಿದೆ.
Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp