'ಚೆಂಡಾಡಿದ ಬಿಎಟಿ ಸೈನಿಕರ ಡೆಡ್ ಬಾಡಿ ತೆಗೆದುಕೊಳ್ಳಿ: ಪಾಕ್ ಗೆ ಭಾರತೀಯ ಸೇನೆ ದಿಟ್ಟ ಉತ್ತರ

ಗಡಿಯೊಳಗೆ ನುಸುಳುತ್ತಿದ್ದ ಪಾಕಿಸ್ತಾನದ ಉಗ್ರರು ಹಾಗೂ ಬಿಎಟಿ ಸೈನಿಕರ ಮೃತದೇಹಗಳನ್ನು ತೆಗೆದುಕೊಂಡು ಹೋಗುವಂತೆ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಗಡಿಯೊಳಗೆ ನುಸುಳುತ್ತಿದ್ದ ಪಾಕಿಸ್ತಾನದ ಉಗ್ರರು ಹಾಗೂ ಬಿಎಟಿ ಸೈನಿಕರ ಮೃತದೇಹಗಳನ್ನು ತೆಗೆದುಕೊಂಡು ಹೋಗುವಂತೆ  ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡಿದೆ.
ಬಿಳಿ ಧ್ವಜದೊಂದಿಗೆ ನಿಮ್ಮ ಸೈನಿಕರ ಮೃತದೇಹಳಗಳನ್ನು ತೆಗೆದುಕೊಂಡು ಹೋಗಿ ಎಂದು ಭಾರತೀಯ ಸೇನೆ ಹೇಳಿದೆ. ಆದರೆ, ಇದಕ್ಕೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪಾಕಿಸ್ತಾನದ ಬಿಎಟಿ ಸೈನಿಕರು ಹಾಗೂ ಉಗ್ರರ ಮೃತದೇಹಗಳನ್ನು ಬಿಳಿ ಧ್ವಜದೊಂದಿಗೆ ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವಂತೆ ಪಾಕಿಸ್ತಾನಕ್ಕೆ ಹೇಳಲಾಗಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.
ಜಮ್ಮು- ಕಾಶ್ಮೀರದ ಕೇರಾನ್ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಐದಾರು ಮಂದಿ ಪಾಕಿಸ್ತಾನದ ಬಿಎಟಿ ಸೈನಿಕರು ಹಾಗೂ ಉಗ್ರರನ್ನು ನಿನ್ನೆ ಹತ್ಯೆ ಮಾಡಲಾಯಿತು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಬ್ಯಾಟ್ ಪಾಕಿಸ್ತಾನದ ಉಗ್ರರು ಹಾಗೂ ಸೈನಿಕರನ್ನೊಳಗೊಂಡ ವಿಶೇಷ ತಂಡವಾಗಿದೆ. ಈ ತಂಡ  ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಹಾಗೂ ಕಣಿವೆ ರಾಜ್ಯದಲ್ಲಿ ಶಾಂತಿ ಕದಡಲು ಪ್ರಯತ್ನಿಸುತಿತ್ತು ಎಂದು ಸೇನಾ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ಹೇಳಿದ್ದಾರೆ.
ಕಾರ್ಯಾಚರಣೆ ವೇಳೆಯಲ್ಲಿ  ಜೈಷ್ -ಇ- ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಸ್ನಿಪರ್ ರೈಪಲ್  ಮತ್ತಿತರ ಯುದ್ದೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಪಾಕಿಸ್ತಾನದ ನಿಜ ಗುಣ ಇದರಿಂದ ಬಯಲಾಗಿದೆ. ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಗಡಿ ನುಸುಳುವಿಕೆ ತಡೆಯುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಲಿವೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com