ಕಾಶ್ಮೀರ ವಿಚಾರ ದಿಕ್ಕು ಬದಲಾಯಿಸುವ ಪ್ರಯತ್ನ ಬೇಡ: ಉಗ್ರರು, ಸೈನಿಕರ ಶವ ಪಡೆಯಲು ನಿರಾಕರಿಸಿದ ಪಾಕ್!

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಸಮೀಪ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಯೋಧರು ಮತ್ತು ಉಗ್ರರ ಶವಗಳನ್ನು ಕೊಂಡೊಯ್ಯುವ ಬಗ್ಗೆ ಪಾಕಿಸ್ತಾನ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಸಮೀಪ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಯೋಧರು ಮತ್ತು ಉಗ್ರರ ಶವಗಳನ್ನು ಕೊಂಡೊಯ್ಯುವ ಬಗ್ಗೆ ಪಾಕಿಸ್ತಾನ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗಡಿ ನಿಯಂತ್ರಣ ರೇಖೆ ಬಳಿಯ ಕೆರೆನ್ ವಲಯದಲ್ಲಿ ಪಾಕಿಸ್ತಾನಿ ಗಡಿ ಕಾರ್ಯಪಡೆ (ಬಿಎಟಿ) ಯೋಧರು ಮತ್ತು ಭಯೋತ್ಪಾದಕರು ಗಡಿ ನುಸುಳಿ ಭಾರತೀಯ ಸೇನಾ ಪೋಸ್ಟ್‌ಗಳ ಮೇಲೆ ದಾಳಿ ನಡೆಸಲು ಶನಿವಾರ ಪ್ರಯತ್ನಿಸಿದ್ದರು. ಈ ವೇಳೆ ಪ್ರತಿ ದಾಳಿ ನಡೆಸಿದ್ದ ಭಾರತೀಯ ಸೇನೆಯು ಪಾಕಿಸ್ತಾನದ ಕಮಾಂಡೊಗಳು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿತ್ತು. ಇದರಲ್ಲಿ ಉಗ್ರರು ಕೂಡ ಸೇರಿದ್ದಾರೆ ಎನ್ನಲಾಗಿದೆ.
ಈ ವಿಚಾರವನ್ನು ಭಾನುವಾರ ಪಾಕಿಸ್ತಾನಕ್ಕೆ ತಿಳಿಸಿದ್ದ ಭಾರತೀಯ ಸೇನೆಯು, 'ಬಿಳಿ ಬಾವುಟ ಹಿಡಿದು ಬನ್ನಿ. ಐದು ಶವಗಳನ್ನು ತೆಗೆದುಕೊಂಡು ಹೋಗಿ, ಅಂತಿಮ ಸಂಸ್ಕಾರ ಮಾಡಿ' ಎಂದು ಸೂಚಿಸಿತ್ತು. ಇದಕ್ಕೆ ಪಾಕಿಸ್ತಾನದ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ರಿಕ್ರಿಯೆ ನೀಡಿರುವ ಪಾಕಿಸ್ತಾನ ಭಾರತೀಯ ಸೇನೆಯಿಂದ ಹತ್ಯೆಗೀಡಾದ ಬ್ಯಾಟ್ ಯೋಧರು ಪಾಕಿಸ್ತಾನ ಸೈನಿಕರಲ್ಲ. ಭಾರತ ವಿಶ್ವಸಮುದಾಯದಿಂದ ಕಾಶ್ಮೀರ ವಿಚಾರವನ್ನು ಇಲ್ಲ ಸಲ್ಲದ ನಾಟಕ ಮಾಡುತ್ತಿದೆ. ಪಾಕಿಸ್ತಾನಿ ಸೇನೆಯ ಯಾವುದೇ ಸೈನಿಕ ಗಡಿ ದಾಟಿ ಹೋಗಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com