ತಲಾಕ್ ಮಸೂದೆ ಅಂಗೀಕಾರಗೊಂಡಿದ್ದಕ್ಕೆ ಸಂಭ್ರಮಿಸಿದ ಮಹಿಳೆಗೆ ತಲಾಕ್ ಕೊಟ್ಟ ಪತಿ!

ಮಹಿಳೆಯರ ಹಕ್ಕು ರಕ್ಷಣೆ ಸಂಬಂಧ ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್ ಅಂಗೀಕಾರಗೊಂಡಿದ್ದನ್ನು ಸಂಭ್ರಮಿಸಿದ ಮಹಿಳೆಗೆ ಪತಿ ತಲಾಕ್ ನೀಡಿ ಮನೆಯಿಂದ ಹೊರ ಹಾಕಿದ್ದಾರೆ.

Published: 04th August 2019 12:00 PM  |   Last Updated: 04th August 2019 05:39 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬಾಂದಾ(ಉತ್ತರಪ್ರದೇಶ): ಮಹಿಳೆಯರ ಹಕ್ಕು ರಕ್ಷಣೆ ಸಂಬಂಧ ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್ ಅಂಗೀಕಾರಗೊಂಡಿದ್ದನ್ನು ಸಂಭ್ರಮಿಸಿದ ಮಹಿಳೆಗೆ ಪತಿ ತಲಾಕ್ ನೀಡಿ ಮನೆಯಿಂದ ಹೊರ ಹಾಕಿದ್ದಾರೆ. 

ಉತ್ತರ ಪ್ರದೇಶದ ಫತೇಪುರ್ ನ ಬಿಂಡಕಿಯಲ್ಲಿ ಮುಫಿದಾ ಖಾತುನ್ ಎಂಬುವರು ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಅಂಗೀಕಾರ ದೊರೆತಿದ್ದಕ್ಕೆ ಸಂಭ್ರಮಿಸಿದ್ದರು. ಇದನ್ನು ನೋಡಿದ ಪತಿ ಆಗಸ್ಟ್ 3ರಂದು ತಲಾಕ್ ನೀಡಿ ಮನೆಯಿಂದ ಹೊರಹಾಕಿದ್ದಾರೆ. 

ಇದರಿಂದ ಗಾಬರಿಗೊಂಡ ಮುಫಿದಾ ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಮುಫಿದಾ ತಮ್ಮ ದೂರಿನಲ್ಲಿ ನನ್ನ ಗಂಡ ಶಂಶುದ್ದೀನ್ ಮೂರು ಬಾರಿ ತಲಾಕ್ ಹೇಳಿ ಮನೆಯಿಂದ ಹೊರ ತಳ್ಳಿದ್ದಾರೆ ಎಂದು ತಿಳಿಸಿದ್ದಾರೆ. 

ಜು.30ರಂದು ಪ್ರತಿಪಕ್ಷಗಳ ಕೆಲ ಸದಸ್ಯರು ಕಲಾಪ ಬಹಿಷ್ಕಾರ ಹಾಗೂ ಗೈರಿನ ಲಾಭ ಪಡೆದ ಬಿಜೆಪಿ ಮುಸ್ಲಿಂ ಮಹಿಳಾ ಹಕ್ಕುಗಳ ಸುರಕ್ಷತೆ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಯಿತು. ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಅಂಕಿತ ಹಾಕಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp