ಮುಂಬೈ ಮಹಾ ಮಳೆ; ಹಲವು ರೈಲುಗಳ ಸಂಚಾರ ರದ್ದು, ವೇಳಾಪಟ್ಟಿ ಬದಲು

ಮಹಾರಾಷ್ಟ್ರದ ಮುಂಬೈಯಲ್ಲಿ ಧಾರಾಕಾರ ಮಳೆಯಿಂದಾಗಿ ಕೇಂದ್ರ ರೈಲ್ವೆ ಆರು ರೈಲುಗಳ ಸಂಚಾರವನ್ನು ರದ್ದುಪಡಿಸಿದ್ದು....
ಥಾಣೆಯಲ್ಲಿ ಮಳೆಗೆ ರೈಲು ಹಳಿ ಮೇಲೆ ನೀರು ನಿಂತಿರುವುದು
ಥಾಣೆಯಲ್ಲಿ ಮಳೆಗೆ ರೈಲು ಹಳಿ ಮೇಲೆ ನೀರು ನಿಂತಿರುವುದು
ಮುಂಬೈ: ಮಹಾರಾಷ್ಟ್ರದ ಮುಂಬೈಯಲ್ಲಿ ಧಾರಾಕಾರ ಮಳೆಯಿಂದಾಗಿ ಕೇಂದ್ರ ರೈಲ್ವೆ ಆರು ರೈಲುಗಳ ಸಂಚಾರವನ್ನು ರದ್ದುಪಡಿಸಿದ್ದು, 6 ರೈಲುಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು ಒಂದು ರೈಲಿನ ಸಂಚಾರವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಲಾಗಿದೆ.
ಮುಂಬೈ-ಮನ್ಮಾದ್ ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಸಂಖ್ಯೆ 22101, ಮನ್ಮಾದ್-ಮುಂಬೈ ರಾಜ್ಯರಾಣಿ ಎಕ್ಸ್ ಪ್ರೆಸ್ 22102, ಮುನ್ಮಾಮಾದ್ -ಎಲ್ ಟಿಟಿ ಎಕ್ಸ್ ಪ್ರೆಸ್ 12118, ಎಲ್ ಟಿಟಿ-ಮನ್ಮಾಮಾದ್ ಎಕ್ಸ್ ಪ್ರೆಸ್ 12117, ಮುಂಬೈ-ಶ್ರೀನಗರ ಶಿರಡಿ ಫಾಸ್ಟ್ ಪ್ಯಾಸೆಂಜರ್ 51033, ಶ್ರೀನಗರ ಶಿರಡಿ-ಮುಂಬೈ ಫಾಸ್ಟ್ ಪ್ಯಾಸೆಂಜರ್ 51044 ರೈಲಿನ ಸಂಚಾರವನ್ನು ಇಂದು ರದ್ದುಪಡಿಸಲಾಗಿದೆ ಎಂದು ಕೇಂದ್ರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್ ಉದಾಸಿ ತಿಳಿಸಿದ್ದಾರೆ.
ನಾಗ್ಪುರ-ಮುಂಬೈ ಸೇವಗ್ರಾಮ್ ಎಕ್ಸ್ ಪ್ರೆಸ್ 12140 ರೈಲು ಸಂಚಾರ ನಾಶಿಕ್ ರೋಡ್ ನಲ್ಲಿ ಅರ್ಧಕ್ಕೆ ಮೊಟಕುಗೊಳಿಸಿದೆ. 6 ರೈಲುಗಳ ಸಂಚಾರ ಬದಲಾವಣೆ ಮಾಡಲಾಗಿದೆ. 
ಮುಂಬೈ ಸುತ್ತಮುತ್ತ ಅಪಾರ ಮಳೆಯಾಗಿರುವುದರಿಂದ ಅಲ್ಲಲ್ಲಿ ನೀರು ನಿಂತಿದೆ. ಸಂಚಾರಕ್ಕೆ ತೊಂದರೆಯಾಗುತ್ತಿದೆ. 
ಸತತ ಭಾರೀ ಮಳೆಯಿಂದ ಮುಂಬೈ, ಸಿಯಾನ್, ನಾಗ್ಪಾಡ, ನಾಲಾ ಸೊಪಾರಾ, ಸಂತ ಕ್ರೂಸ್, ಅಂಧೇರಿ ಮತ್ತು ಚೆಂಬೂರ್ ಗಳಲ್ಲಿ ನೀರು ನಿಂತಿವೆ.
ಮುಂದಿನ 24 ಗಂಟೆ ಇದೇ ರೀತಿ ಮಳೆಯ ಪರಿಸ್ಥಿತಿ ಮುಂದುವರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com