ಜಮ್ಮು- ಕಾಶ್ಮೀರ ಜನರ ನಂಬಿಕೆಗೆ ದ್ರೋಹ- ಒಮರ್ ಅಬ್ದುಲ್ಲಾ

ಸಂವಿಧಾನದ 370 ನೇ ವಿಧಿ ರದ್ದುಪಡಿಸಿ ಆದೇಶ ಹೊರಡಿಸಿರುವ ಕೇಂದ್ರಸರ್ಕಾರದ ಕ್ರಮಕ್ಕೆ ಆಘಾತಕಾರಿಯಾಗಿದೆ ಎಂದಿರುವ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇದು ಜಮ್ಮು- ಕಾಶ್ಮೀರದ ಜನರ ನಂಬಿಕೆಗೆ ಬಗೆದ ದ್ರೋಹ ಎಂದು ಟೀಕಿಸಿದ್ದಾರೆ.
ಒಮರ್ ಅಬ್ದುಲ್ಲಾ
ಒಮರ್ ಅಬ್ದುಲ್ಲಾ
ಶ್ರೀನಗರ:  ಸಂವಿಧಾನದ 370 ನೇ ವಿಧಿ ರದ್ದುಪಡಿಸಿ ಆದೇಶ ಹೊರಡಿಸಿರುವ ಕೇಂದ್ರಸರ್ಕಾರದ ಕ್ರಮಕ್ಕೆ ಆಘಾತಕಾರಿಯಾಗಿದೆ ಎಂದಿರುವ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇದು ಜಮ್ಮು- ಕಾಶ್ಮೀರದ ಜನರ ನಂಬಿಕೆಗೆ ಬಗೆದ ದ್ರೋಹ ಎಂದು ಟೀಕಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ  ಸಂವಿಧಾನದ 370 ಅನ್ವಯವಾಗದ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಗೃಹ ಸಚಿವ ಅಮಿತ್ ಶಾ ಮಂಡಿಸುವ ಮೂಲಕ ಕೇಂದ್ರ ಸರ್ಕಾರ ಇಂದು ಆಘಾತಕಾರಿ ಹಾಗೂ ಏಕಮುಖಿಯಾದಂತಹ  ನಿರ್ಣಯ ಕೈಗೊಂಡಿದೆ.1947ರಲ್ಲಿ ಆದ ಒಪ್ಪಂದದ ಪ್ರಕಾರ ಭಾರತಕ್ಕೆ ಸೇರಿಸಿಕೊಂಡಿದ್ದ ಜಮ್ಮು- ಕಾಶ್ಮೀರದ ಜನತೆ ಇಟ್ಟುಕೊಂಡಿದ್ದ ನಂಬಿಕೆಗೆ ದ್ರೋಹ ಬಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ನಿರ್ಧಾರದಿಂದ ಅಪಾಯಕಾರಿ ಘಟನೆಗಳಾಗಿವೆ. ಶ್ರೀನಗರದಲ್ಲಿ ನಿನ್ನೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಕೈಗೊಂಡ ನಿರ್ಧಾರದ ವಿರುದ್ಧ ಜಮ್ಮು- ಕಾಶ್ಮೀರದ ಜನತೆ ಮೇಲೆ ಆಕ್ರಮಣ ಮಾಡಲಾಗಿದೆ. ನಮ್ಮ ಕರಾಳ ಆತಂಕಗಳು ನಿಜವಾಗಿವೆ. ಕಣಿವೆ ರಾಜ್ಯದಲ್ಲಿ ಶಸ್ತ್ರ ಸಜ್ಜಿತ ಸೇನೆಯನ್ನು ನಿಯೋಜಿಸುವ ಮೂಲಕ ಪ್ರಜಾಸತಾತ್ಮಕ ಧ್ವನಿಯನ್ನು ಅಡಗಿಸಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಕ್ರಮ, ಸಂವಿಧಾನಬಾಹಿರವಾಗಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ ಹೋರಾಟ ನಡೆಸಲಿದೆ. ಮುಂದಿನ ಧೀರ್ಘ ಹೋರಾಟಕ್ಕೆ ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com