ಶ್ರೀನಗರ: ಕರ್ಫ್ಯೂ ಜಾರಿ, ಮೆಹಬೂಬಾ, ಒಮರ್ ಗೆ ಗೃಹ ಬಂಧನ

ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಪ್ತಿ ಹಾಗೂ ಒಮರ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ನಿಷೇಧಾಜ್ಞೆ ಜಾರಿ ಚಿತ್ರ
ನಿಷೇಧಾಜ್ಞೆ ಜಾರಿ ಚಿತ್ರ
ಶ್ರೀನಗರ: ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಫೀಪಲ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್  ಗನಿ ಲೊನ್ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಪ್ತಿ ಹಾಗೂ ಒಮರ್ ಅಬ್ದುಲ್ಲಾ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಕಾಶ್ಮೀರದಾದ್ಯಂತ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಸ್ಯಾಟಲೈಟ್ ಪೋನ್ ಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ.
ಈ ಬಗ್ಗೆ ಸರಣಿ ಟ್ನಿಟ್ ಮಾಡಿರುವ  ಒಮರ್ ಅಬ್ದುಲ್ಲಾ, ಮಧ್ಯರಾತ್ರಿಯಿಂದ ಗೃಹಬಂಧನದಲ್ಲಿ ಇರಿಸಲಾಗಿದೆ.   ಇತರ ಮುಖಂಡರ ಬಂಧನಕ್ಕೂ ಪ್ರಕ್ರಿಯೆ ಆರಂಭವಾಗಿದೆ. ಇದು ನಿಜ ಎಂದು ತಿಳಿಯಲು ಅನ್ಯ ಮಾರ್ಗವಿಲ್ಲ, ಒಂದು ವೇಳೆ ನಿಜ ಆಗಿದಲ್ಲೀ ಬೇರೊಂದು ಕಡೆಯಿಂದ ನಿಮ್ಮನ್ನು ಗೃಹ ಬಂಧನದಲ್ಲಿಡುವುದನ್ನು ನೋಡುತ್ತೇನೆ  ಅಲ್ಲಾಹನು ನಮ್ಮನ್ನು ರಕ್ಷಿಸು ಎಂದು ಹೇಳಿದ್ದಾರೆ. 
ಮತ್ತೊಂದು ಟ್ವೀಟ್ ನಲ್ಲಿ , ಕಾಶ್ಮೀರದ ಜನರೇ ತಮ್ಮನ್ನು ಏಕೆ ಗೃಹ ಬಂಧನದಲ್ಲಿಡಲಾಗಿದೆ ಎಂಬುದು ಗೊತ್ತಿಲ್ಲ. ಆದರೆ, ಇದರ ಬಗ್ಗೆ ಅನುಮಾನ ಮೂಡುತ್ತಿದೆ. ಎಲ್ಲರೂ ಸುರಕ್ಷಿತವಾಗಿ ಇರಲಿ ಎಂದು ಆಶಿಸುವುದಾಗಿ ಹೇಳಿದ್ದಾರೆ 
ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಪ್ತಿ ಮನೆಯಿಂದ ಎಲ್ಲಿಯೂ ಹೊರ ಹೋಗದಂತೆ ಇರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ಟ್ವೀಟ್ ಮಾಡಿರುವ ಮೆಹಬೂಬಾ ಮುಪ್ತಿ, ಇಂಟರ್ನೆಟ್ , ಮೊಬೈಲ್ ಪೋನ್ ಸೇವೆ ಕಡಿತದ ಬಗ್ಗೆ ವರದಿ ಕೇಳಿದ್ದೇನೆ. ಕರ್ಪ್ಯೂ ಜಾರಿ ಮಾಡಲಾಗುತ್ತಿದೆ.  ನಾಳೆಗಾಗಿ ನಾವು ಏನನ್ನು ಕಾಯುತ್ತಿದ್ದೇವೆ ಎಂಬುದು ದೇವರಿಗೆ ಗೊತ್ತಿದೆ. ಇದು ಸಂಕಷ್ಟದ ಸಂದರ್ಭವಾಗಿದ್ದು, ಇದರ ವಿರುದ್ಧ ಒಟ್ಟಾಗಿ ಹೋರಾಟ ಮಾಡೋಣ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಉಸ್ಮನ್ ಮಜಿದ್ ಹಾಗೂ ಸಿಪಿಐ(ಎಂ) ಶಾಸಕ ಎಂವೈ ತಾರಿಗಾಮಿ ಕೂಡಾ ತಮ್ಮನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಆದಾಗ್ಯೂ, ಅಧಿಕೃತ ಮಾಹಿತಿಗಳು ತಿಳಿದುಬಂದಿಲ್ಲ.
ಮತ್ತೊಮ್ಮೆ ಜಮ್ಮು- ಕಾಶ್ಮೀರದ ಮುಖಂಡರಿಗೆ ಬೆಂಬಲ ಕೋರಿ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಟ್ವಿಟ್ ಮಾಡಿದ್ದಾರೆ. ಸಂಸತ್ ಅಧಿವೇಶನ ಇನ್ನೂ ನಡೆಯುತ್ತಿದ್ದು, ಇದರ ವಿರುದ್ಧ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.
ನಿನ್ನೆ ಮಧ್ಯರಾತ್ರಿಯಿಂದಲೂ ಕರ್ಫ್ಯೂ ಜಾರಿ ಮಾಡಲಾಗಿದ್ದು, ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಯಾವುದೇ ಸಾರ್ವಜನಿಕ ಸಭೆ, ಮೆರವಣಿಗೆ ನಡೆಸದಂತೆ ನಿರ್ಬಂಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com