370 ಕಿತ್ತು ಹಾಕಿದ್ದಕ್ಕೆ ಹೆದರಿ ಕುಳಿತ್ತಿದ್ದ ಪಾಕ್‌ಗೆ ಮತ್ತೊಂದು ಶಾಕ್ ಕೊಟ್ಟ ಸುಬ್ರಮಣಿಯನ್ ಸ್ವಾಮಿ!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ್ದ ಬೆನ್ನಲ್ಲೇ ನಡುಗಿ ಹೋಗಿರುವ ಪಾಕಿಸ್ತಾನಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ...
ಇಮ್ರಾನ್ ಖಾನ್-ಸುಬ್ರಮಣಿಯನ್ ಸ್ವಾಮಿ
ಇಮ್ರಾನ್ ಖಾನ್-ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ್ದ ಬೆನ್ನಲ್ಲೇ ನಡುಗಿ ಹೋಗಿರುವ ಪಾಕಿಸ್ತಾನಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಮತ್ತೊಂದು ಶಾಕ್ ನೀಡಿದ್ದಾರೆ. 
ಆರ್ಟಿಕಲ್ 370 ರನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ಐತಿಹಾಸಿಕ ನಿರ್ಣಯದ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ನಾನು ಹೇಳಿದ್ದು ಸರಿಯಾಗಿದೆ ಎಂಬುದು ಸಾಬೀತಾಗಿದೆ. ಆರ್ಟಿಕಲ್ 370 ರದ್ದುಗೊಳಿಸುವುದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿಲ್ಲ ಎಂದು ಹೇಳಿದ್ದೆ. ಅದು ಇಂದು ಸಾಬೀತಾಗಿದೆ. ಆದರೂ ರಾಷ್ಟ್ರಪತಿಗಳು ಅದಾಗಲೇ ಅಂಗೀಕರಿಸಿದ್ದ ನಿರ್ಣಯವನ್ನು ಅಮಿತ್ ಶಾ ಸಂಸತ್ ನಲ್ಲಿ ಘೊಷಿಸಿದ್ದಾರೆ. ಆರ್ಟಿಕಲ್ 370, 35ಎ ಇಂದು ಅಂತ್ಯಗೊಂಡಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದರು. 
ಇನ್ನು ಸುಬ್ರಮಣಿಯನ್ ಸ್ವಾಮಿ ಅವರು, ಪಾಕ್ ಆಕ್ರಮಿತ ಪ್ರದೇಶವನ್ನು ಮತ್ತೆ ಪಡೆದುಕೊಳ್ಳುವುದೇ ಕೇಂದ್ರ ಸರ್ಕಾರದ ಮುಂದಿರುವ ಮತ್ತೊಂದು ಬಹುದೊಡ್ಡ ಅಜೆಂಡಾವಾಗಿದೆ. ಆಕ್ರಮಿತ ಪ್ರದೇಶವನ್ನು ಹಿಂಪಡೆಯಲು ಭಾರತ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೆದರುವಂತೆ ಮಾಡಿದೆ. 
ಕಾಶ್ಮೀರದ ವಿಚಾರದಲ್ಲಿ ಇನ್ನು ಮಧ್ಯಸ್ಥಿಕೆ ವಹಿಸುವ ಅಗತ್ಯವೇ ಇಲ್ಲ. ಅಂದು ದೇಶದಿಂದ ಕಾನೂನು ಬಾಹಿರವಾಗಿ ಪಡೆದುಕೊಂಡಿದ್ದ ಪಾಕ್ ಆಕ್ರಮಿತ ಪ್ರದೇಶವನ್ನು ಭಾರತಕ್ಕೆ ಹಿಂದುರುಗಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಸೂಚಿಸಲಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com