ಪಾಕ್‌ಗೆ ಮುಖಭಂಗ: 370ನೇ ವಿಧಿ ರದ್ದು, ಭಾರತದ ನಿರ್ಣಯಕ್ಕೆ ಜೈ ಅಂದ ಮುಸ್ಲಿಂ ರಾಷ್ಟ್ರ ಯುಎಇ!

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ್ದಕ್ಕೆ ಕಟ್ಟಾ ಮುಸ್ಲಿಂ ರಾಷ್ಟ್ರವಾಗಿರುವ ಯುಎಇ ಸಹ ಭಾರತವನ್ನು ಬೆಂಬಲಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದು ಮಾಡಿದ್ದಕ್ಕೆ ಕಟ್ಟಾ ಮುಸ್ಲಿಂ ರಾಷ್ಟ್ರವಾಗಿರುವ ಯುಎಇ ಸಹ ಭಾರತವನ್ನು ಬೆಂಬಲಿಸಿದೆ. 
ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜ್ಯಗಳ ಮರು ವಿಂಗಡನೆ ಒಂದು ಇದೇನು ವಿಶಿಷ್ಟ ಘಟನೆಯಲ್ಲ. ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿ ಇದರ ಮುಖ್ಯ ಉದ್ದೇಶವಾಗಿದ್ದು ಇದು ಭಾರತೀಯ ಸಂವಿಧಾನದ ಪ್ರಕಾರ ಆಂತರಿಕ ವಿಷಯವಾಗಿದೆ ಎಂದು ಗಲ್ಫ್ ರಾಷ್ಟ್ರದ ರಾಯಭಾರಿ ಅಹ್ಮದ್ ಅಲ್ ಬನ್ನಾ ಅವರು ಹೇಳಿದ್ದಾರೆ.
ಇದೇ ಅಲ್ಲದೆ, ಈ ಬದಲಾವಣೆಗಳು ಸಾಮಾಜಿಕ ನ್ಯಾಯ ಮತ್ತು ಸುರಕ್ಷತೆ ಮತ್ತು ಸ್ಥಳೀಯ ಆಡಳಿತದಲ್ಲಿ ಜನರ ವಿಶ್ವಾಸವನ್ನು ಸುಧಾರಿಸುತ್ತದೆ ಮತ್ತು ಮತ್ತಷ್ಟು  ಸ್ಥಿರತೆ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ ಎಂದು ಯುಎಇ ಹೇಳಿದೆ.
ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಪಡಿಸುವ ಮತ್ತು ರಾಜ್ಯವನ್ನು ವಿಭಜಿಸುವ ಸರ್ಕಾರದ ಕಾಶ್ಮೀರ ನೀತಿ ಮಸೂದೆ ಸಂಸತ್ ನ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದೆ. ಹೀಗಾಗಿ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿಸಿ 2 ಭಾಗಗಳಾಗಿ ವಿಭಜಿಸಲಾಗಿದೆ. ಜಮ್ಮು ಕಾಶ್ಮೀರವು ವಿಧಾನಸಭೆಯುಕ್ತ ಕೇಂದ್ರಾಡಳಿತ ಪ್ರದೇಶವಾಗಿದ್ದು ಲಡಾಖ್ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com