'ಸಲ್ಮಾನ್ ಖಾನ್' ನಾಪತ್ತೆ, ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಅಸ್ಸಾಂ ಕುಟುಂಬ!

ತಮ್ಮ ಮನೆಯ ಅಚ್ಚು ಮೆಚ್ಚಿನ ಸೂಪರ್ ಸ್ಟಾರ್ ಆಗಿದ್ದ 'ಸಲ್ಮಾನ್ ಖಾನ್' ನಾಪತ್ತೆಯಾಗಿದ್ದು, ಅಸ್ಸಾಂನ ನೊಂದ...
ಸಲ್ಮಾನ್ ಖಾನ್ - ಮೇಕೆ
ಸಲ್ಮಾನ್ ಖಾನ್ - ಮೇಕೆ
ಗುವಾಹತಿ: ತಮ್ಮ ಮನೆಯ ಅಚ್ಚು ಮೆಚ್ಚಿನ ಸೂಪರ್ ಸ್ಟಾರ್ ಆಗಿದ್ದ 'ಸಲ್ಮಾನ್ ಖಾನ್' ನಾಪತ್ತೆಯಾಗಿದ್ದು, ಅಸ್ಸಾಂನ ನೊಂದ ಕುಟುಂಬ ಊಟ, ತಿಂಡಿ ಸೇವಿಸುವುದನ್ನೇ ಬಿಟ್ಟುಬಿಟ್ಟಿದೆ.
ಇಲ್ಲಿ ನಾಪತ್ತೆಯಾಗಿರುವುದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಲ್ಲ. ಸಲ್ಮಾನ್ ಖಾನ್ ಹೆಸರಿನ ಮೇಕೆ. ಅಸ್ಸಾಂನ ತಿನ್ಸುಕೀ ಜಿಲ್ಲೆಯ ಕಾಕೊಪತರ್ ಗ್ರಾಮದ ಎಡಿ ಗುಲಾಮ್ ಮನ್ಸುರಿ ಅವರು ಸಾಕಿದ್ದ ಎರಡು ವರ್ಷದ ಮೇಕೆಯೊಂದು ಕಳೆದ ಸೋಮವಾರದಿಂದ ನಾಪತ್ತೆಯಾಗಿದೆ.
ಮನ್ಸುರಿ ಕುಟುಂಬ ತಮ್ಮ ಅಚ್ಚು ಮೆಚ್ಚಿನ ಮೇಕೆ ಪತ್ತೆಗಾಗಿ ಎಲ್ಲಾ ರೀತಿಯ ಯತ್ನಗಳನ್ನು ಮಾಡಿದ್ದಾರೆ. ಆದರೂ ಮೇಕೆ ಸಿಗದ ಪರಿಣಾಮ ಈಗ ಮೇಕೆ ಬಗ್ಗೆ ಮಾಹಿತಿ ನೀಡಿದರೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ಮೇಕೆಯ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ ಗುಲಾಮ್ ಮನ್ಸುರಿ ಪುತ್ರ ನಾಸಿಮ್ ಮನ್ಸುರಿ, ಆ ಮೇಕೆಯನ್ನು ನಾವು ಪ್ರೀತಿಯಿಂದ ಸಲ್ಮಾನ್ ಖಾನ್ ಎಂದು ಕರೆಯುತ್ತಿದ್ದೇವೆ. ಅದು ನಮ್ಮ ಮನೆಯಲ್ಲಿಯೇ ಹುಟ್ಟಿ ಬೆಳೆದಿದ್ದು, ನಮ್ಮ ಕುಟುಂಬದ ಸದಸ್ಯನಂತೆ ಇತ್ತು. ಅದು ಸುಮಾರು 40 ಕೆಜಿ ತೂಕದ ಮೇಕೆ ಎಂದು ಹೇಳಿದ್ದಾರೆ.
ಮೇಕೆಯೊಂದಿಗೆ ನಮಗೆ ಭಾವನಾತ್ಮಕ ಸಂಬಂಧ ಇತ್ತ. ಇದೀಗ ಅದು ನಾಪತ್ತೆಯಾಗಿರುವುದು ನಮಗೆ ಆಘಾತವಾಗಿದ್ದು, ಮೇಕೆ ನಾಪತ್ತೆಯಾದಾಗಿನಿಂದ ನನ್ನ ಪೋಷಕರು ಊಟ ಮಾಡುವುದನ್ನೇ ಬಿಟ್ಟಿದ್ದಾರೆ ಎಂದು ನಾಸಿಮ್ ತಿಳಿಸಿದ್ದಾರೆ. ಅಲ್ಲದೆ ಮೇಕೆಯನ್ನು ರಾಷ್ಟ್ರೀಯ ಹೆದ್ದಾರಿಯಿಂದ ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com