ಡಿಫರೆಂಟ್ ಪ್ರೇಮ್ ಕಹಾನಿ: ಕುಖ್ಯಾತ ಕಳ್ಳನನ್ನು ವರಿಸಿದ ಮಹಿಳಾ ಪೇದೆಗಾಗಿ ಪೋಲೀಸರಿಂದ ಶೋಧ!

ಇಂತಹಾ ಒಂದು ಪ್ರೇಮಕಥೆ ನೀವಿದುವರೆಗೆ ಬಾಲಿವುಡ್ ಚಿತ್ರಗಳಲ್ಲಿ ಸಹ ನೋಡಿರಲಾರಿರಿ! ಓರ್ವ ಮಹಿಳಾ ಪೋಲೀಸ್ ಪೇದೆ ತಾನು ತನಿಖೆಗಾಗಿ ಕರೆತಂದಿದ್ದ ಕುಖ್ಯಾತ ದರೋಡೆಕೋರನನ್ನೇ ಪ್ರೀತಿಸಿ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಖನೌ: ಇಂತಹಾ ಒಂದು ಪ್ರೇಮಕಥೆ ನೀವಿದುವರೆಗೆ ಬಾಲಿವುಡ್ ಚಿತ್ರಗಳಲ್ಲಿ ಸಹ ನೋಡಿರಲಾರಿರಿ! ಓರ್ವ ಮಹಿಳಾ ಪೋಲೀಸ್ ಪೇದೆ ತಾನು ತನಿಖೆಗಾಗಿ ಕರೆತಂದಿದ್ದ ಕುಖ್ಯಾತ ದರೋಡೆಕೋರನನ್ನೇ ಪ್ರೀತಿಸಿ ಮದುವೆಯಾಗಿರುವ ಕಥೆ ಇದು.ಗ್ರೇಟರ್ ನೋಯ್ಡಾದ ನ್ಯಾಯಾಲಯದ ಆವರಣದಲ್ಲಿ ಈ ಪ್ರೇಮಕಥೆ ಅನಾವರಣವಾಗಿದೆ. ಅಲ್ಲದೆ ಅದು ಅಲ್ಲಿಗೇ ನಿಲ್ಲದೆ ಅವರ ದಾಂಪತ್ಯ ಜೀವನದಲ್ಲಿ ಪರಿಸಮಾಪ್ತಿಯಾಗಿದೆ!
ಪೋಲೀಸ್ ಪೇದೆಯಾಗಿದ್ದ ಪಾಯಲ್ ದರೋಡೆಕೋರನಾಗಿದ್ದ ರಾಹುಲ್ ತರ್ಸಾನಾ  (30) ನನ್ನು ಪ್ರಥಮ ಬಾರಿಗೆ ಪ್ರಕರಣದ ವಿಚಾರಣೆಯೊಂದರ ವೇಳೆ ನ್ಯಾಯಾಲಯದಲ್ಲಿ ಭೇಟಿಯಾಗಿದ್ದರು.ಉದ್ಯಮಿ  ಮನಮೋಹನ್ ಗೋಯಲ್ ಅವರ ಕೊಲೆಗೆ ಸಂಬಂಧಿಸಿದ ಪ್ರಕರಣವು 2014 ರ ಮೇ 9 ರಂದು ವಿಚಾರಣೆಗೆ ಬಂದಾಗ ಅದರಲ್ಲಿ ರಾಹುಲ್ ಮುಖ್ಯ ಆರೋಪಿಯಾಗಿ ಪರಿಗಣಿಸಲ್ಪಟ್ಟಿದ್ದನು.. ಇದಲ್ಲದೆ, ರಾಹುಲ್ ಈ ಪ್ರದೇಶದಲ್ಲಿ ಒಂದು ಡಜನ್ನಿಗೂ  ಹೆಚ್ಚು ಲೂಟಿ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಪಾಯಲ್ ಓರ್ವ ಮಹಿಳಾ ಪೇದೆಯಾಗಿದ್ದು ರಾಹುಲ್ ನ್ಯಾಯಾಲಯದ ವಿಚಾರಣೆಯಲ್ಲಿದ್ದಾಗ ಆಕೆಯನ್ನು ಆತನ ರಕ್ಷಣೆಗಾಗಿ ನೇಮಕ ಮಾಡಲಾಗಿದೆ. ಆ ನಂತರ ವಿಚಾರಣೆಗೆ ರಾಹುಲ್ ನ್ಯಾಯಾಲಯಕ್ಕೆ ಹಾಜರಾದಾಗಲೆಲ್ಲ ಆಕೆ ಆರೋಪಿಯನ್ನು ಭೇಟಿಯಾಗುತ್ತಿದ್ದಳು.
ಪೊಲೀಸ್ ಮೂಲಗಳ ಪ್ರಕಾರ, ಪಾಯಲ್ "ಜೈಲಿನಲ್ಲಿದ್ದಾಗ ಮತ್ತು ಜೈಲಿನಿಂದ ಹೊರಗಿದ್ದಾಗಲೂ  ಸಹ"ಪಾಯಲ್ ಅವನೊಂದಿಗೆ ಸಂಪರ್ಕದಲ್ಲಿದ್ದರು ಈ ವೇಳೆ ವರ್ಷಗಳ ಅಂತರದಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ.ರಾಹುಲ್ ಸಾಮಾಜಿಕ ತಾಣದಲ್ಲಿ ಕೆಲ ಚಿತ್ರಗಳನ್ನು ಅಪ್ ಮಾಡಿದ್ದಾನೆ.  ಎಂದು ಮೂಲಗಳು ತಿಳಿಸಿವೆ, ಅಲ್ಲಿ ಆತ ಹಾಗೂ ಪಾಯಲ್ ವಿವಾಹ ಮಂಟಪದಲ್ಲಿ ವಧೂ ವರರಂತೆ ಹೂಮಾಲೆ ಧರಿಸಿದ್ದಾರೆ. ಅವು ತಮ್ಮ ಮದುವೆಯ ಫೋಟೋಗಳಾಗಿದ್ದು ಆತ ಪೇದೆಯನ್ನು ವಿವಾಹವಾಗಿದ್ದನೆಂದು ಆರೋಪಿಸಲಾಗಿದೆ. ಆದರೆ ಮದುವೆಯ ದಿನಾಂಕ ಮಾತ್ರ ಇನ್ನೂ ತಿಳಿದಿಲ್ಲ.
ಮತ್ತೊಂದೆಡೆ, ಪಾಯಲ್ ಅವರ ಮೇಲಧಿಕಾರಿಗಳು ವಿವಾಹದ ಬಗ್ಗೆ ಸುಳಿವಿಲ್ಲಮದುವೆಯ ಸಮಯದಲ್ಲಿ ಆಕೆಯನ್ನು ಗೌತಮ ಬುದ್ದ ನಗರದ ಠಾಣೆಯಲ್ಲಿ ಕರ್ತವ್ಯಕ್ಕೆ ನೇಮಿಸಲಾಗಿತ್ತು ಎಂದಿದ್ದಾರೆ.ಈ ಪೊಲೀಸ್ ಠಾಣೆಯ ಅಧಿಕಾರಿಗಳು ಆಕೆಯ ಪ್ರಸ್ತುತ ಇರುವ ಸ್ಥಳದ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು."ಈ ಮಹಿಳೆ ಪೇದೆಯನ್ನು ಎಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ನಾವು ಪರಿಶೀಲಿಸುತ್ತಿದ್ದೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು" ಎಂದು ಎಸ್ಪಿ (ಗ್ರಾಮೀಣ) ರಣವಿಜಯ್ ಸಿಂಗ್ ಹೇಳಿದ್ದಾರೆ ಏತನ್ಮಧ್ಯೆ, ಮಹಿಳಾ ಕಾನ್ಸ್ಟೇಬಲ್ ಕುರಿತ ವರದಿಗಳಿಗೆ ಪ್ರತಿಕ್ರಿಯಿಸಿದ ನೋಯ್ಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆ ನೀಡಿದ್ದು, ಮಹಿಳೆ ಯಾರೆಂದು ಪರಿಶೀಲಿಸಲು ಇಲಾಖೆ ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಇನ್ನು ಈಗಲೂ ಸಹ ದಂಪತಿಗಳು ರಹಸ್ಯ ಸ್ಥಳದಲ್ಲಿ ತಂಗಿದ್ದಾರೆ. ಇದರಿಂದಾಗಿ ರಾಹುಲ್ ತಾನು ಪೋಲೀಸ್ ಇಲಾಖೆ ಕಣ್ತಪ್ಪಿಸಲು ಅನುಕೂಲವಾಗಲಿದೆ ಎಂದು ಹೇಳಲಾಗುತಿದೆ. ಇಷ್ತಕ್ಕೂ ರಾಹುಲ್ ಅನಿಲ್ ದುಜಾನಾ ಗ್ಯಾಂಗ್‌ನ ಸದಸ್ಯನಾಗಿದ್ದಾನೆ.008 ರಲ್ಲಿ ರಾಹುಲ್ ಅಪರಾಧದ ಲೋಕಕ್ಕೆ ಕಾಲಿಟ್ಟಿದ್ದನು. 2017 ರಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪ್ರಕರಣದಲ್ಲಿ  ರಾಹುಲ್ ಪೋಲೀಸರಿಗೆ ಶರಣಾಗಿದ್ದ.  ಆಗ ಆತನನ್ನು ಮತ್ತೆ ಜೈಲಿಗಟ್ಟಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com