ಗನ್ ಪಾಯಿಂಟ್‌‌ನಲ್ಲಿ‌ ಸೊಸೆ ಮೇಲೆ ಅತ್ಯಾಚಾರ: ಮಾಜಿ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

ಗನ್ ಪಾಯಿಂಟ್‌‌ನಲ್ಲಿ‌ ಸೊಸೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಾಜಿ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಗನ್ ಪಾಯಿಂಟ್‌‌ನಲ್ಲಿ‌ ಸೊಸೆ ಮೇಲೆ ಅತ್ಯಾಚಾರ: ಮಾಜಿ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಗನ್ ಪಾಯಿಂಟ್‌‌ನಲ್ಲಿ‌ ಸೊಸೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಾಜಿ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಡಿಸೆಂಬರ್ 31ರ ಮಧ್ಯರಾತ್ರಿ ಮಾಜಿ ಶಾಸಕ ಮನೋಜ್ ಶೂಕೇನ್ ಗನ್ ತೋರಿಸಿ ಬೆದರಿಸಿ ಸೊಸೆಯ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಸಂತ್ರಸ್ತ ಮಹಿಳೆ ದೆಹಲಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶೂಕೇನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 

ದೆಹಲಿಯ ನಂಗ್ಲೋಯಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ ಶೂಕೇನ್ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಚುನಾವಣೆಯಲ್ಲಿ ಸೋಲು ಕಂಡಿದ್ದರು. 

ಸಂತ್ರಸ್ತ ಮಹಿಳೆ ದೂರಿನಲ್ಲಿ, ಕಳೆದ ಡಿಸೆಂಬರ್ 31ರ ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆಗಾಗಿ ನಾನು, ನನ್ನ ಪತಿ ಮತ್ತು ನನ್ನ ಸೋದರ ಮೂವರು ಪಾಶ್ಚಿಮ್ ವಿಹಾರ ಪ್ರದೇಶದಲ್ಲಿರುವ ಹೊಟೇಲ್ ವೊಂದಕ್ಕೆ ಹೋಗಿದ್ದೇವು. ಅಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಂತರ ನಾನು ನನ್ನ ಮಾವನ ಮನೆಗೆ ತೆರಳಿದೆ. ಈ ವೇಳೆ ನನ್ನ ಗಂಡ ಸ್ನೇಹಿತರೊಂದಿಗೆ ಹೊರಗಡೆ ಹೋದರು. 

ನಾನು ಮನೆಯಲ್ಲಿ ಮಲಗಿದ್ದಾಗ ಮನೆಗೆ ಬಂದ ನನ್ನ ಮಾವ ನನ್ನ ಬಳಿ ಮಾತನಾಡಬೇಕು ಎಂದು ರೂಂನ ಒಳಗೆ ಬಂದರು. ಬಳಿ ಬಂದು ನನ್ನ ಜೊತೆ ಅನುಚಿತವಾಗಿ ವರ್ತಿಸಿದರು. ಆಗ ನಾನು ಹೊರಗಡೆ ಹೋಗುವಂತೆ ಹೇಳಿದೆ. ಜೋರಾಗಿ ಕೂಗಿದಾಗ ತಮ್ಮ ಬಳಿಯಿದ್ದ ಗನ್ ಅನ್ನು ಹೊರಗೆ ತೆಗೆದು ಸುಮ್ಮನಿರು ಇಲ್ಲದಿದ್ದರೆ ನಿನ್ನ ಸಹೋದರನನ್ನು ಗುಂಡಿಟ್ಟು ಹತ್ಯೆ ಮಾಡುವುದಾಗಿ ಬೆದರಿಸಿ, ನನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com