ಹೈದರಾಬಾದ್: ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ಉದ್ಯಮಿ, 12 ಲಕ್ಷ ಬಿಲ್ ಪಾವತಿಸದೆ ಪರಾರಿ

ಸುಮಾರು 100 ದಿನಗಳ ಕಾಲ ನಗರದ ಪ್ರತಿಷ್ಠಿತ ಸ್ಟಾರ್ ಹೋಟೆಲ್ ವೊಂದರಲ್ಲಿ ತಂಗಿದ್ದ ಉದ್ಯಮಿ, 12.34 ಲಕ್ಷ ರೂಪಾಯಿ ಬಿಲ್ ಪಾವತಿಸದೆ ಪರಾರಿಯಾಗಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಹೋಟೆಲ್
ಹೋಟೆಲ್

ಹೈದರಾಬಾದ್: ಸುಮಾರು 100 ದಿನಗಳ ಕಾಲ ನಗರದ ಪ್ರತಿಷ್ಠಿತ ಸ್ಟಾರ್ ಹೋಟೆಲ್ ವೊಂದರಲ್ಲಿ ತಂಗಿದ್ದ ಉದ್ಯಮಿ, 12.34 ಲಕ್ಷ ರೂಪಾಯಿ ಬಿಲ್ ಪಾವತಿಸದೆ ಪರಾರಿಯಾಗಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ತಾಜ್ ಬಂಜಾರ ಹೋಟೆಲ್ ನೀಡಿದ ದೂರಿನ ಆಧಾರದ ಮೇಲೆ ವಿಶಾಖಪಟ್ಣಣಂ ಮೂಲದ ಉದ್ಯಮಿ ಎ ಶಂಕರ್ ನಾರಾಯಣ ಅವರ ವಿರುದ್ಧ ಹೈದರಾಬಾದ್ ಪೊಲೀಸರು ವಂಚನೆ ಮತ್ತು ಅಪರಾಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೋಟೆಲ್ ಆಡಳಿತ ಮಂಡಳಿ ಪ್ರಕಾರ, ಶಂಕರ್ ನಾರಾಯಣ ಅವರು ಐಷಾರಾಮಿ ಕೊಠಡಿಯಲ್ಲಿ 102 ದಿನಗಳ ಕಾಲ ತಂಗಿದ್ದರು. 102 ದಿನಕ್ಕೆ ಒಟ್ಟು 25.96 ಲಕ್ಷ ಆಗಿದ್ದು, ಈ ಪೈಕಿ 13.62 ಲಕ್ಷ ಪಾವತಿಸಿದ್ದಾರೆ. ಉಳಿದ 12.34 ಲಕ್ಷ ರೂಪಾಯಿ ಬಿಲ್ ಪಾವತಿಸದೆ, ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡದೆ ಪರಾರಿಯಾಗಿದ್ದಾರೆ. ಬಳಿಕ ಹೋಟೆಲ್ ಸಿಬ್ಬಂದಿ ನಾರಾಯಣ ಅವರನ್ನು ಸಂಪರ್ಕಿಸಿದ್ದು, ಬಾಕಿ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಕೆಲ ದಿನಗಳ ನಂತರ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಹೀಗಾಗಿ ಹೋಟಲ್ ಆಡಳಿತ ಮಂಡಳಿ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಈ ಮಧ್ಯೆ, ಉದ್ಯಮಿ ನಾರಾಯಣ ಅವರು ಹೋಟೆಲ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ತಾವು ಎಲ್ಲಾ ಬಿಲ್ ಪಾವತಿ ಮಾಡಿಯೇ ಹೋಟೆಲ್ ಖಾಲಿ ಮಾಡಿರುವುದಾಗಿ ಹೇಳಿದ್ದಾರೆ. ಹೋಟೆಲ್ ಆರೋಪದಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದ್ದು, ಹೋಟೆಲ್ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.

ಹೋಟೆಲ್ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸಬ್ ಇನ್ಸ್ ಪೆಕ್ಟರ್ ಪಿ ರವಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com