ಕಾಶ್ಮೀರಿ ಕನ್ಯೆಯರ ಕುರಿತ ಖಟ್ಟರ್ ಹೇಳಿಕೆ ತುಚ್ಛವಾದದ್ದು: ರಾಹುಲ್ ಗಾಂಧಿ ತೀವ್ರ ಆಕ್ರೋಶ

ಕಾಶ್ಮೀರಿ ಮಹಿಳೆಯರ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತುಚ್ಛವಾದ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಾಶ್ಮೀರಿ ಮಹಿಳೆಯರ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತುಚ್ಛವಾದ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ಮಹಿಳೆಯರ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಖಟ್ಟರ್ ತುಚ್ಚವಾಗಿ ಮಾತನಾಡಿದ್ದಾರೆ. ಖಟ್ಟರ್ ಅವರಿಗೆ ಇಷ್ಟು ವರ್ಷಗಳ ಕಾಲ ಆರ್ ಎಸ್ ಎಸ್ ನೀಡಿದ್ದ ತರಬೇತಿ ಏನು ಎಂಬುದು ಈ ಮಾತುಗಳಿಂದ ಗೊತ್ತಾಗುತ್ತಿದೆ. ಪುರುಷರು ಮಾಲೀಕತ್ವ ಹೊಂದಲು ಮಹಿಳೆಯರು ಆಸ್ತಿಗಳಲ್ಲ ಅವರ ಮನುಷ್ಯ ಜೀವಿಗಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಫತೇಹಾಬಾದ್ ನಲ್ಲಿ ಶುಕ್ರವಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಕಾರಣ ಕಾಶ್ಮೀರಿ ಮಹಿಳೆಯರನ್ನು ವಿವಾಹಗಳ ಮೂಲಕ ರಾಜ್ಯಕ್ಕೆ ಕರೆತರಬಹುದು ಎಂದು ಹೇಳಿದ್ದರು. ಹರಿಯಾಣದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಹೆಣ್ಣು - ಗಂಡು ಮಕ್ಕಳ ಲಿಂಗಾನುಪಾತ ವ್ಯತ್ಯಾಸಕ್ಕೆ ಕುಖ್ಯಾತವಾಗಿದ್ದು, “ಬೇಟಿ ಪಡಾವೊ ಬೇಟಿ ಬಚಾವೊ” ಯೋಜನೆ ಆರಂಭಿಸಿದ ನಂತರ ಲಿಂಗಾನುಪಾತವನ್ನು 850 ರಿಂದ 933ಕ್ಕೆ ಹೆಚ್ಚಿಸಲಾಗಿದೆ. ಇದೊಂದು ಅತಿದೊಡ್ಡ ಸಾಮಾಜಿಕ ಬದಲಾವಣೆ, ಯಾರೊಬ್ಬರೂ ಬೇಕಾದರೂ ಲಿಂಗಾನುಪಾತ ಭವಿಷ್ಯದಲ್ಲಿ ಸೃಷ್ಟಿಸಲಿರುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬಹುದು.. ಪರಿಸ್ಥಿತಿ ಇದೇರೀತಿ ಮುಂದುವರಿದಿದ್ದರೆ, ಮಹಿಳೆಯರ ಸಂಖ್ಯೆ ಇಳಿಕೆಯಾಗಿ ಪುರುಷರ ಸಂಖ್ಯೆ ಏರಿಕೆಯಾಗುತ್ತಿತ್ತು ಎಂದು ಖಟ್ಟರ್ ಹೇಳಿದ್ದರು.

ನಮ್ಮ ಸಂಪುಟದ ಮಂತ್ರಿ ಓ.ಪಿ. ಧನಕರ್, ಬಿಹಾರದಿಂದ ಸೊಸೆಯರನ್ನು ತರಬೇಕಿದೆ ಎಂದು ಹೇಳಿದ್ದರು. ಈಗ ಕಾಶ್ಮೀರವೂ ಮುಕ್ತಗೊಂಡಿದೆ. ನಾವು ಕಾಶ್ಮೀರದಿಂದಲೂ ಹೆಣ್ಣುಗಳನ್ನು ತರಬಹುದು ಎಂದು ಈಗ ಕೆಲವರು ಜೋಕ್ ಮಾಡುತ್ತಿದ್ದಾರೆ ಎಂದು ಖಟ್ಟರ್ ಹೇಳಿದ್ದರು. ಹೆಣ್ಣು ಗಂಡು ಲಿಂಗಾನುಪಾತ ಸೂಕ್ತವಾಗಿದ್ದರೆ ಸಮಾಜ ಸಮತೋಲಿತವಾಗಿರಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com