ಮುಗಿಬಿದ್ದು ಲಸಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ರೈಲ್ವೆ ಲೋಕೋ ಪೈಲಟ್ ಗಳು: ಕಾರಣ ಏನು ಗೊತ್ತೇ?

ರೈಲ್ವೆ ಲೋಕೋ ಪೈಲಟ್ ಗಳು ಮುಗಿಬಿದ್ದು ವಕ್ರೀಕಾರಕ ಶಸ್ತ್ರಚಿಕಿತ್ಸೆ (ಲಸಿಕ್ ಶಸ್ತ್ರಚಿಕಿತ್ಸೆ) ಮೊರೆ ಹೋಗುತ್ತಿರುವುದು ರಾಂಚಿ ರೈಲು ವಿಭಾಗದಲ್ಲಿ ಕಂಡುಬಂದಿದೆ.
ಮುಗಿಬಿದ್ದು ಲಸಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ರೈಲ್ವೆ ಲೋಕೋ ಪೈಲಟ್ ಗಳು: ಕಾರಣ ಏನು ಗೊತ್ತೇ?

ರಾಂಚಿ: ರೈಲ್ವೆ ಲೋಕೋ ಪೈಲಟ್ ಗಳು ಮುಗಿಬಿದ್ದು ವಕ್ರೀಕಾರಕ ಶಸ್ತ್ರಚಿಕಿತ್ಸೆ (ಲಸಿಕ್ ಶಸ್ತ್ರಚಿಕಿತ್ಸೆ) ಮೊರೆ ಹೋಗುತ್ತಿರುವುದು ರಾಂಚಿ ರೈಲು ವಿಭಾಗದಲ್ಲಿ ಕಂಡುಬಂದಿದೆ.  

ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಲೋಕೋ ಪೈಲಟ್ ನ ಕೆಲಸಕ್ಕೆ ಸ್ವಾಭಾವಿಕವಾಗಿ ಅನರ್ಹರಾಗುತ್ತಾರೆ, ನಂತರ ಕ್ಲೆರಿಕಲ್ ಹುದ್ದೆಯಲ್ಲಿ ಮುಂದುವರೆಯಬಹುದು, ಜೊತೆಗೆ ಈ ಹಿಂದೆ ಸಿಗುತ್ತಿದ್ದ ಸೌಲಭ್ಯಗಳೂ ಸಿಗುತ್ತವೆ ಎಂಬುದು ಲೋಕೋ ಪೈಲಟ್ ಗಳು ಈ ರೀತಿ ಮಾಡುತ್ತಿರುವುದರ ಹಿಂದಿನ ಉದ್ದೆಶ ಎಂಬುದು ಬಹಿರಂಗವಾಗಿದೆ. 

ಲಸಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಕೆಲವು ವರ್ಷಗಳ ನಂತರ ರೈಲು ಚಾಲನೆ ಮಾಡುವುದಕ್ಕೆ ಕಣ್ಣಿದ ದೃಷ್ಟಿ ದೋಷ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಲಸಿಕ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರನ್ನು ರೈಲು ಕೈಪಿಡಿಯ ಪ್ರಕಾರ, ರೈಲು ಚಾಲನೆ ಜವಾಬ್ದಾರಿಯಿಂದ ಮುಕ್ತಗೊಳಿಸಿ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗುತ್ತದೆ. 

ಇತ್ತೀಚಿನ ದಿನಗಳಲ್ಲಿ ಬರೊಬ್ಬರಿ ಈ ರೀತಿಯ 17 ಪ್ರಕರಣಗಳು ಬೆಳಕಿಗೆ ಬಂದಿದ್ದು ಲೋಕೋ ಪೈಲಟ್ ಹುದ್ದೆಗೆ ಸೇರಿದ 3-4 ವರ್ಷಗಳಲ್ಲೇ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com