ಜಮ್ಮು-ಕಾಶ್ಮೀರ: 370ನೇ ವಿಧಿ ರದ್ದು, ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ರಾಜಕೀಯ ಕುಟುಂಬಗಳು

ಕಣಿವೆ ರಾಜ್ಯ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಗೊಂಡ ನಂತರ ಮುಂಚೂಣಿಯಲ್ಲಿದ್ದ ರಾಜಕೀಯ ಕುಟುಂಬಗಳು ಇದೀಗ ಅಸ್ತಿತ್ವಕೊಂಡಂತಾಗಿದ್ದು, ಮತ್ತೆ ಅಸ್ವಿತ್ವ ಪಡೆಯುವ ನಿಟ್ಟಿನಲ್ಲಿ ಹೆಣಗಾಡುತ್ತಿವೆ.
ಜಮ್ಮು-ಕಾಶ್ಮೀರ: 370ನೇ ವಿಧಿ ರದ್ದು, ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ರಾಜಕೀಯ ಕುಟುಂಬಗಳು

ಶ್ರೀನಗರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಗೊಂಡ ನಂತರ ಮುಂಚೂಣಿಯಲ್ಲಿದ್ದ ರಾಜಕೀಯ ಕುಟುಂಬಗಳು ಇದೀಗ ಅಸ್ತಿತ್ವಕೊಂಡಂತಾಗಿದ್ದು, ಮತ್ತೆ ಅಸ್ವಿತ್ವ ಪಡೆಯುವ ನಿಟ್ಟಿನಲ್ಲಿ ಹೆಣಗಾಡುತ್ತಿವೆ.

70 ವರ್ಷಗಳಿಂದಲೂ ರಾಜಕೀಯದಲ್ಲಿ ಮುಂಚೂಣಿಯಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ ಅಬ್ದುಲ್ಲಾಗಳು ಹಾಗೂ 1999ರಲ್ಲಿ ರಚನೆಯಾದ ಪಿಡಿಪಿ ಜಮ್ಮು ಕಾಶ್ಮೀರದಲ್ಲಿ  ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದು, ಸಂವಿಧಾನದಿಂದ ಪಡೆದಿದ್ದ ವಿಶೇಷ ಸೌಲಭ್ಯವನ್ನು ಬಳಸಿಕೊಂಡು ರಾಜಕೀಯ ಮಾಡುತ್ತಾ ಬಂದಿದ್ದರು.

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಸಂವಿಧಾನದ 370ನೇ ವಿಧಿ ಹಾಗೂ 35ಎ ವಿಧಿಗಳು ಕಣಿವೆ ರಾಜ್ಯದಲ್ಲಿನ ಜನರ ಹಿತಾಸಕ್ತಿಯನ್ನು ಖಂಡಿತವಾಗಿ ಕಾಪಾಡಲಿವೆ. ಈ ವಿಧಿಗಳು ಹೊರಗಿನ ರಾಜ್ಯದವರು ಕಣಿವೆ ರಾಜ್ಯದಲ್ಲಿ ಭೂಮಿ ಖರೀದಿಸಲು, ಉದ್ಯೋಗ, ಸ್ಕಾಲರ್ ಶಿಪ್ ಪಡೆಯಲು ಅವಕಾಶ ನೀಡುವುದಿಲ್ಲ ಎಂದು ಜನರಿಗೆ ಹೇಳುತ್ತಾ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದರು. 

ಆದರೆ,   ಸಂವಿಧಾನದ 370 ಹಾಗೂ 35ಎ ವಿಧಿಯನ್ನು ರದ್ದುಪಡಿಸುವುದಾಗಿ ಸರ್ಕಾರ ಹೇಳಿದ ನಂತರ ಮುಂಚೂಣಿಯಲ್ಲಿದ್ದ ರಾಜಕೀಯ ಪಕ್ಷಗಳು ಅವೆರಡು ವಿಧಿಗಳನ್ನು ಬೆಂಬಲಿಸುವ ಮಾತನಾಡುತ್ತಿದ್ದವು. ಒಂದು ವೇಳೆ ಈ ವಿಧಿಗಳನ್ನು ರದ್ದುಪಡಿಸಿದರೆ ಭಾರತದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಹೇಳಿಕೆ ನೀಡಿದ್ದವು.

ಸಂವಿಧಾನದ 370 ವಿಧಿ ರದ್ದತಿಗೆ ಮುನ್ನ ಬಂಧನಕ್ಕೊಳಗಾಗುವ ಮುನ್ನ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನೀಡಿದ್ದ ಹೇಳಿಯೇ ಕೊನೆಯದ್ದಾಗಿದೆ. ನಂತರ ಟ್ವೀಟ್ ಮಾಡಿದ್ದ ಅವರು, ಜಮ್ಮು ಕಾಶ್ಮೀರದಲ್ಲಿ ಭಾರತ ಔದ್ಯೋಗಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹೇಳಿಕೆ ನೀಡಿದ್ದರು. ಜಮ್ಮು- ಕಾಶ್ಮೀರದಲ್ಲಿ  ಮುಂಚೂಣಿಯಲ್ಲಿದ್ದ ರಾಜಕೀಯ ಸತ್ತಾಂತಾಗಿದೆ ಎಂದು ಶ್ರೀನಗರದ ನಿವಾಸಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com