ಶ್ರೀನಗರದಲ್ಲಿ ಭಾರಿ ಪ್ರತಿಭಟನೆ ಕುರಿತ ವರದಿ ತಳ್ಳಿಹಾಕಿರುವ ಕೇಂದ್ರ ಗೃಹಸಚಿವಾಲಯ

ಜಮ್ಮು-ಕಾಶ್ಮೀರದ ರಾಜಧಾನಿ  ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚುಮಂದಿ ಜಮಾವಣೆಗೊಂಡು ಭಾರಿ ಪ್ರತಿಭಟನೆ ನಡೆಸಿದ್ದಾರೆ ಎಂಬ ವರದಿಗಳನ್ನು  ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ ತಳ್ಳಿಹಾಕಿದ್ದು..
ಶ್ರೀನಗರದಲ್ಲಿ ಭಾರಿ ಪ್ರತಿಭಟನೆ ಕುರಿತ ವರದಿ ತಳ್ಳಿಹಾಕಿರುವ ಕೇಂದ್ರ ಗೃಹಸಚಿವಾಲಯ

ಶ್ರೀನಗರ: ಜಮ್ಮು-ಕಾಶ್ಮೀರದ ರಾಜಧಾನಿ  ಶ್ರೀನಗರದಲ್ಲಿ 10 ಸಾವಿರಕ್ಕೂ ಹೆಚ್ಚುಮಂದಿ ಜಮಾವಣೆಗೊಂಡು ಭಾರಿ ಪ್ರತಿಭಟನೆ ನಡೆಸಿದ್ದಾರೆ ಎಂಬ ವರದಿಗಳನ್ನು  ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ ತಳ್ಳಿಹಾಕಿದ್ದು, ಈ ಕುರಿತ  ಮಾಧ್ಯಮಗಳ ವರದಿ ಕಪೋಲ ಕಲ್ಪಿತ ಹಾಗೂ ಸುಳ್ಳು ಎಂದು ಹೇಳಿದೆ.

ರಾಯಿಟರ್ಸ್ ಸುದ್ದಿ ಸಂಸ್ಥೆ  ಮೊದಲು ಈ ವರದಿಯನ್ನು ಪ್ರಕಟಿಸಿತ್ತು. ಈ ವರದಿಯನ್ನು ಆಧರಿಸಿ   ಪಾಕಿಸ್ತಾನದ ಡಾನ್  ದಿನ ಪತ್ರಿಕೆ  ಶ್ರೀನಗರದಲ್ಲಿ  10 ಸಾವಿರಕ್ಕೂ ಹೆಚ್ಚಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಮಾಡಿದೆ. ಈ ವರದಿ ಸಂಪೂರ್ಣ ಕಪೋಲ ಕಲ್ಪಿತ ಹಾಗೂ  ಸುಳ್ಳಿನಿಂದ ಕೂಡಿದೆ ಎಂದು  ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಶ್ರೀನಗರ ಹಾಗೂ ಬಾರಾಮುಲ್ಲದಲ್ಲಿ   ಕೆಲವು  ಬೆರಳೆಣಿಕೆಯ ಜನರು  ಅಲ್ಲಲ್ಲಿ  ಪ್ರತಿಭಟನೆ ನಡೆಸಿದ್ದಾರೆ.  ಈ ಪ್ರತಿಭಟನೆಗಳಲ್ಲಿ  20 ಕ್ಕೂ ಹೆಚ್ಚಿನ ಜನರು ಭಾಗವಹಿಸಿರಲಿಲ್ಲ  ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಕಳೆದ ಆಗಸ್ಟ್  6 ರಂದು ಜಮ್ಮು ಕಾಶ್ಮೀರವನ್ನು  ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ  ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡನಾ ವಿಧೇಯಕಕ್ಕೆ  ಸಂಸತ್ತು ಅನುಮೋದನೆ ನೀಡಿದ ನಂತರ ರಾಜ್ಯದಲ್ಲಿ 144ರ ನಿಷೇಧಾಜ್ಞೆ ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com