370ನೇ ವಿಧಿ ರದ್ದು: ವಾಘಾ ಗಡಿಯಲ್ಲಿ ಬಿಎಸ್ ಎಫ್ , ಪಾಕ್ ರೆಂಜರ್ಸ್ ನಡುವೆ ಸಿಹಿ ವಿನಿಮಯ ಇಲ್ಲ

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುತ್ತಿದ್ದ 370ನೇ ವಿಧಿ ರದ್ದುಗೊಂಡ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಅಠಾರಿ- ವಾಘಾ ಗಡಿಯಲ್ಲಿ ಈದ್ ಹಬ್ಬದ ಪ್ರಯುಕ್ತ  ಬಿಎಸ್ಎಫ್ ಹಾಗೂ ಪಾಕಿಸ್ತಾನದ ರೇಂಜರ್ಸ್ ಗಳ ನಡುವೆ  ಸಿಹಿ ವಿನಿಮಯ ನಡೆದಿಲ್ಲ.
370ನೇ ವಿಧಿ ರದ್ದು: ವಾಘಾ ಗಡಿಯಲ್ಲಿ ಬಿಎಸ್ ಎಫ್ , ಪಾಕ್ ರೆಂಜರ್ಸ್ ನಡುವೆ ಸಿಹಿ ವಿನಿಮಯ ಇಲ್ಲ

ನವದೆಹಲಿ: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುತ್ತಿದ್ದ 370ನೇ ವಿಧಿ ರದ್ದುಗೊಂಡ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಬಂಧ ಮತ್ತಷ್ಟು ಹದಗೆಟ್ಟಿದ್ದು, ಅಠಾರಿ- ವಾಘಾ ಗಡಿಯಲ್ಲಿ ಈದ್ ಹಬ್ಬದ ಪ್ರಯುಕ್ತ  ಬಿಎಸ್ಎಫ್ ಹಾಗೂ ಪಾಕಿಸ್ತಾನದ ರೇಂಜರ್ಸ್ ಗಳ ನಡುವೆ  ಸಿಹಿ ವಿನಿಮಯ ನಡೆದಿಲ್ಲ.

ಪಾಕಿಸ್ತಾನದ ರೇಂಜರ್ಸ್ ಗಳಿಗೆ ಸಿಹಿ ಕೊಡಲು ಬಿಎಸ್ ಎಫ್ ಬಯಸಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ದೀಪಾವಳಿ, ಈದ್ ಹಬ್ಬಗಳಲ್ಲಿ ಬಿಎಸ್ ಎಫ್ ಹಾಗೂ ಪಾಕಿಸ್ತಾನದ ರೆಂಜರ್ಸ್ ಗಳ ನಡುವೆ ಕೊಡುಗೆಗಳನ್ನು ನೀಡಿ  ಸಿಹಿ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು.

 ಆದರೆ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಉಭಯ ದೇಶಗಳ ನಡುವಿನ ರಾಯಬಾರಿ ಸಂಬಂಧ ಹದಗೆಟ್ಟಿತ್ತು.ಭಾರತದೊಂದಿಗೆ ವ್ಯಾಪಾರ ಸಂಪರ್ಕವನ್ನು ಪಾಕಿಸ್ಥಾನ ರದ್ದುಪಡಿಸಿದೆ. ಇದರಿಂದಾಗಿ ರೇಂಜರ್ಸ್ ಗಳು ನಮ್ಮಗೆ ಸಿಹಿ ನೀಡದೆ ಇರುವ ಒಳ್ಳೇಯ ಅವಕಾಶ ಸಿಕ್ಕಂತಾಗಿದೆ ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

2016 ಅಕ್ಟೋಬರ್ ತಿಂಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಆದ ನಂತರ ಬಿಎಸ್ ಎಫ್ ಯೋಧರು ಪಾಕಿಸ್ತಾನ ರೇಂಜರ್ಸ್ ಗಳೊಂದಿಗೆ ಸಿಹಿ ವಿನಿಮಯ ಮಾಡಿಕೊಂಡಿರಲಿಲ್ಲ. ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಳೆದ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿಯೂ ಪಾಕ್ ರೇಂಜರ್ಸ್ ಗಳೊಂದಿಗೆ ಸಿಹಿ ವಿನಿಮಯ ಮಾಡಿಕೊಂಡಿರಲಿಲ್ಲ. 

ಉಭಯ ದೇಶಗಳ ನಡುವೆ ಸಂಬಂಧ ತೀರಾ ಕೆಳಮಟ್ಟಕ್ಕೆ ತಲುಪಿದ್ದರೂ ಸಿಹಿ ವಿನಿಮಯ ಮಾಡಿಕೊಳ್ಳುವ ಒಳ್ಳೇಯ ಪದ್ಧತಿ. ಇದನ್ನು ಮುಂದುವರೆಸಬೇಕೆಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com