ನೀರು ಕೇಳಲು ಬಂದು ವಿಕಲಾಂಗ ಗಂಡನ ಮುಂದೆಯೇ ಮಹಿಳೆಯ ಸಾಮೂಹಿಕ ಅತ್ಯಾಚಾರ

ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿಗಳು ವಿಕಲಾಂಗ ಪತಿಯ ಕಣ್ಣ ಮುಂದೆಯೇ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಗೈದಿರುವ ಹೀನಾಯ ಘಟನೆ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದಿಬ್ರುಗಢ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿಗಳು ವಿಕಲಾಂಗ ಪತಿಯ ಕಣ್ಣ ಮುಂದೆಯೇ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಗೈದಿರುವ ಹೀನಾಯ ಘಟನೆ ನಡೆದಿದೆ.

ಅಸ್ಸಾಂನ ಬೊಕಪಾರದಲ್ಲಿರುವ ವಿಕಲಾಂಗನ ಮನೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ವಿಕಲಾಂಗ ವ್ಯಕ್ತಿಯ ಮುಂದೆಯೇ ಆತನ ಪತ್ನಿಯ ಮೇಲೆ ಮೂವರು ದುರುಳರು ಅತ್ಯಾಚಾರ ಎಸಗಿದ್ದಾರೆ. 

ನೀರು ಕೇಳಿಕೊಂಡು ವಿಕಲಾಂಗನ ಮನೆಗೆ ಹೋದ ಮೂವರು ವ್ಯಕ್ತಿಗಳು ನೋಡ ನೋಡುತ್ತಲೇ ಆತನ ಪತ್ನಿಯನ್ನು ಒಳಗೆ ಎಳೆದುಕೊಂಡು ಹೋಗಿ ವಿಕಲಾಂಗ ಪತಿಯ ಮುಂದೆಯೇ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಧ್ರುವ ಬೊರಾ ಅವರು ತಿಳಿಸಿದ್ದಾರೆ. 

ಶನಿವಾರ ತಡರಾತ್ರಿ 1.30ರಲ್ಲಿ ಆರೋಪಿಗಳು ಸಂತ್ರಸ್ತರ ಮನೆ ಬಳಿ ತೆರಳಿದ್ದಾರೆ. ಈ ವೇಳೆ ಮಾಲೀಕ ಬಾಗಿಲು ತೆಗೆಯುವುದನ್ನು ನೋಡಿ ನೀರನ್ನು ಕೇಳಿದ್ದಾರೆ. ಮಾಲೀಕ ನೀರು ತರಲು ಮನೆಯೊಳಗೆ ಹೋಗುತ್ತಿದ್ದಂತೆ ಮೂವರು ಹಿಂಬಾಲಿಸಿ ಬಲವಂತವಾಗಿ ಮನೆಯೊಳಗೆ ನುಗ್ಗಿ ಆತನ ಪತ್ನಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ಸಂತ್ರಸ್ತೆ ಸಾಕಷ್ಟು ಪ್ರಯತ್ನ ಪಟ್ಟರೂ ಆರೋಪಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಸಹಾಯಕ ಪತಿಯ ಮುಂದೆಯೇ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ತನಿಖೆ ನಡೆಸಿ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ತ್ರಿಶಿತ್​ ಶರ್ಮ, ವಿವೇಕ್​ ಕುನ್ವಾರ್​ ಮತ್ತು ಭಾಸ್ಕರ್​ ಬೊರ್ಗೊಹೈ ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com