ಮಹತ್ವದ ಬೆಳವಣಿಗೆಯಲ್ಲಿ ಸಿಕ್ಕಿಂನ 10 ಎಸ್‍ಡಿಎಫ್ ಶಾಸಕರು ಬಿಜೆಪಿ ಸೇರ್ಪಡೆ

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‍ (ಎಸ್‍ಡಿಎಫ್‍)ನ ಹಾಲಿ 10 ಶಾಸಕರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಸೇರಿದ ಎಸ್ ಡಿಎಫ್ ಶಾಸಕರು
ಬಿಜೆಪಿ ಸೇರಿದ ಎಸ್ ಡಿಎಫ್ ಶಾಸಕರು

ನವದೆಹಲಿ: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‍ (ಎಸ್‍ಡಿಎಫ್‍)ನ ಹಾಲಿ 10 ಶಾಸಕರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ 10 ಶಾಸಕರು ಬಿಜೆಪಿಯ ಸದಸ್ಯತ್ವವನ್ನು ಪಡೆದುಕೊಂಡರು. ಬಳಿಕ ಹಾಲಿ ಶಾಸಕರು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದರು.

ಎಸ್ ಡಿಎಫ್ ನ ಹದಿಮೂರು ಶಾಸಕರ ಪೈಕಿ ಹತ್ತು ಮಂದಿ ಬಿಜೆಪಿ ಸೇರಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ. ಈ ಮೂಲಕ ಬಿಜೆಪಿಯು ಸಿಕ್ಕಿಂನಲ್ಲಿ ಪ್ರಮುಖ ಪ್ರತಿಪಕ್ಷ ಆಗಲಿದೆ.

ಎಸ್ ಡಿಎಫ್ ಈ ಹಿಂದೆ ಬಿಜೆಪಿ ಮೈತ್ರಿ ಪಕ್ಷವಾಗಿತ್ತು. ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ ಡಿಎಫ್ ಸೋಲನುಭವಿಸಿತ್ತು. ಅದಕ್ಕೂ ಮುನ್ನ ಇಪ್ಪತ್ತೈದು ವರ್ಷ ಪಕ್ಷ ಅಧಿಕಾರದಲ್ಲಿ ಇತ್ತು.

ಸಿಕ್ಕಿಂ ಸಾಂಪ್ರದಾಯಿಕವಾಗಿ ಪ್ರಾದೇಶಿಕ ಪಕ್ಷದ ಭದ್ರಕೋಟೆಯಾಗಿರುವುದರಿಂದ ಎರಡೂ ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ವ್ಯವಸ್ಥಿತವಾಗಿ ಚೀನಾ, ಭೂತಾನ್ ಮತ್ತು ನೇಪಾಳಕ್ಕೆ ಹೊಂದಿಕೊಂಡಿರುವ ಈಶಾನ್ಯ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಯನ್ನು ಬಳಸಿಕೊಳ್ಳಲು ಯತ್ನಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com