ಶ್ರೀನಗರ ಹೋಟೆಲ್ ಗೆ ಬಂಧಿತ ಮಾಜಿ ಐಎಎಸ್ ಅಧಿಕಾರಿ-ರಾಜಕಾರಣಿ ಶಾ ಫಸಲ್ ಸ್ಥಳಾಂತರ

ಜಮ್ಮು ಮತ್ತು ಕಾಶ್ಮೀರದ ಮಾಜಿ ಅಧಿಕಾರಿ ಮಾಜಿ ಐಎಎಸ್ ಶಾ ಫಜಲ್ ಅವರನ್ನು ಶ್ರೀನಗರದ ಸೆಂಟೌರ್ ಹೋಟೆಲ್‌ನಲ್ಲಿ ತಾತ್ಕಾಲಿಕ ಬಂಧನದಲ್ಲಿರಿಸಲಾಗಿದೆ ಎಂದು  ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಶ್ರೀನಗರ ಹೋಟೆಲ್ ಗೆ ಬಂಧಿತ ಮಾಜಿ ಐಎಎಸ್ ಅಧಿಕಾರಿ-ರಾಜಕಾರಣಿ ಶಾ ಫಸಲ್ ಸ್ಥಳಾಂತರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಅಧಿಕಾರಿ ಮಾಜಿ ಐಎಎಸ್ ಶಾ ಫಜಲ್ ಅವರನ್ನು ಶ್ರೀನಗರದ ಸೆಂಟೌರ್ ಹೋಟೆಲ್‌ನಲ್ಲಿ ತಾತ್ಕಾಲಿಕ ಬಂಧನದಲ್ಲಿರಿಸಲಾಗಿದೆ ಎಂದು  ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಇದಾಗಲೇ ಗೃಹಬಂಧನದಲ್ಲಿದ್ದ ಅವರನ್ನು ರಾತ್ರಿವೇಳೆ ಮನೆಯಿಂದ ಹೋಟೆಲ್‌ಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.

ಬುಧವಾರ ಮಧ್ಯರಾತ್ರಿ ದೆಹಲಿಯಿಂದ  ಇಸ್ತಾಂಬುಲ್ ಗೆ ತೆರಳಲು ವಿಮಾನ ನಿಲ್ದಾಣದಲ್ಲಿ ಪ್ರಯಾಣಕ್ಕೆ ಸಿದ್ದವಾಗಿದ್ದ ಫಜಲ್  ಅವರನ್ನು ವಶಕ್ಕೆ ಪಡೆದು ಪುನಃ ಶ್ರೀನಗರಕ್ಕೆ ಕರೆದೊಯ್ಯಲಾಗಿದೆ.ಅಲ್ಲಿ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಪ್ರಾಥಮಿಕ ವಿಚಾರಣೆಯ ವೇಳೆ, ಇಸ್ತಾಂಬುಲ್‌ನಿಂದ ಲಂಡನ್‌ಗೆ ಪ್ರಯಾಣಿಸಲು ಫಜಲ್ ತಯಾರಾಗಿದ್ದರೆನ್ನುವುದು ಗೊತ್ತಾಗಿದೆ.ಜಮ್ಮು ಮತ್ತು ಕಾಶ್ಮೀರದ ಮಾಜಿ ಅಧಿಕಾರಿ ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ನೀಡಿದ ನಂತರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂಮೆಂಟ್ ಪಕ್ಷವನ್ನು ಕಟ್ಟಿ ಕಾಶ್ಮೀರ ವಿಧಾನಸಭೆಗೆ ಸ್ಪರ್ಧಿಸಿದ್ದರು.

ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ನಂತರ, ಶ್ರೀನಗರಕ್ಕೆ ಕರೆದೊಯ್ಯಲಾಗಿದ್ದು ಅವರನ್ನು ಮತ್ತೆ ಪಿಎಸ್ಎ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಟಿಕಲ್ 370 ರ ಅಡಿಯಲ್ಲಿ ಒದಗಿಸಲಾಗಿದ್ದ  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮುನ್ನ ಎಂಟು ಸಾವಿರ ಮಂದಿಯನ್ನು ಸೆರೆಯಲ್ಲಿಟ್ಟ ಕ್ರಮವನ್ನು ಫಸಲ್ ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com