ಬಾಲಾಕೋಟ್ ಕಾರ್ಯಾಚರಣೆ ಅನುಭವವನ್ನು ಪದಗಳಲ್ಲಿ ವರ್ಣಿಸಲಾಗದು- ಮಹಿಳಾ ಐಎಎಫ್ ಅಧಿಕಾರಿ

ಬಾಲಾಕೋಟ್ ಕಾರ್ಯಾಚರಣೆ ಅನುಭವಕ್ಕೆ  ವಿಶ್ವದ ಬೇರೆ ಯಾವುದೇ ಸರಿಸಾಟಿಯಾಗುವುದಿಲ್ಲ ಎಂದು ಯುದ್ದ ಸೇವಾ ಪದಕ ಪ್ರಶಸ್ತಿ ವಿಜೇತೆ ಭಾರತೀಯ ವಾಯುಪಡೆ ಅಧಿಕಾರಿ ಮಿಂಟಿ ಅಗರ್ ವಾಲ್ ಹೇಳಿದ್ದಾರೆ.
ಬಾಲಾಕೋಟ್ ಕಾರ್ಯಾಚರಣೆ ಅನುಭವವನ್ನು ಪದಗಳಲ್ಲಿ ವರ್ಣಿಸಲಾಗದು- ಮಹಿಳಾ ಐಎಎಫ್ ಅಧಿಕಾರಿ

ನವದೆಹಲಿ: ಬಾಲಾಕೋಟ್ ಕಾರ್ಯಾಚರಣೆ ಅನುಭವಕ್ಕೆ  ವಿಶ್ವದ ಬೇರೆ ಯಾವುದೇ ಸರಿಸಾಟಿಯಾಗುವುದಿಲ್ಲ ಎಂದು ಯುದ್ದ ಸೇವಾ ಪದಕ ಪ್ರಶಸ್ತಿ ವಿಜೇತೆ ಭಾರತೀಯ ವಾಯುಪಡೆ ಅಧಿಕಾರಿ ಮಿಂಟಿ ಅಗರ್ ವಾಲ್ ಹೇಳಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ನಡೆದ ಪಾಕಿಸ್ತಾನ ಜೊತೆಗಿನ ಬಾಹ್ಯಾಕಾಶ ಕಾದಾಟದ ಸಂದರ್ಭದಲ್ಲಿ ಮಿಂಟಿ ಅಗರ್ ವಾಲ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಮಿಲಿಟರಿ ಗೌರವ ಪಡೆದ ಬಳಿಕ ಮಾತನಾಡಿದ ಅವರು, ಬಾಲಾಕೋಟೆ ಕಾರ್ಯಾಚರಣೆ ಅನುಭವವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ ಎಂದರು. 

ಆದರೆ ಖಂಡಿತವಾಗಿಯೂ, ನಾನು ಧರಿಸಿರುವ ಸಮವಸ್ತ್ರದಲ್ಲಿ ಹೆಮ್ಮೆಯಾಗುತ್ತದೆ ಮತ್ತು ರಾಷ್ಟ್ರವು ಅಂತಹ ಗೌರವವನ್ನು ನೀಡಿದೆ ಎಂಬ ಕಾರಣದಿಂದಾಗಿ ನಮ್ರತೆ ಇದೆ ಎಂದು ಅವರು ಹೇಳಿದರು. 

ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ರಕ್ಷಣಾ ಸಚಿವಾಲಯದಿಂದ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿತ್ತು. ಸ್ಕ್ವಾಡ್ರನ್ ಲೀಡರ್ ಅಗರ್ ವಾಲ್ ಈ ಯುದ್ದ ಸೇವಾ ಪದಕ ಪಡೆದ ಮಹಿಳಾ ರಕ್ಷಣಾ ಅಧಿಕಾರಿಯಾಗಿದ್ದಾರೆ. ಯುದ್ಧ, ಸಂಘರ್ಷ ಅಥವಾ ಒತ್ತೇಯಾಳು ಇಟ್ಟುಕೊಂಡ ಸಂದರ್ಭದಲ್ಲಿ ಅಪ್ರತಿಮ ಧೈರ್ಯ ಪ್ರದರ್ಶನಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 

ಪಾಕಿಸ್ತಾನ ವಿರುದ್ಧದ ಬಾಹ್ಯಾಕಾಶ ಕಾದಾಟದ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್  ಪೈಲಟ್ ನಲ್ಲಿದ್ದಾಗ ಅವರಿಗೆ  ವಿಮಾನದ ಪರಿಸ್ಥಿತಿಯ ಚಿತ್ರಣವನ್ನು ನೀಡುತ್ತಿದೆ.  ನನ್ನ ಪರದೆಯಿಂದ ಎಫ್-16 ಬ್ಲಿಪ್ ಮರೆಯಾಗುವುದನ್ನು ನಾನು ನೋಡಿದ್ದೆ ನಂತರ ಆತ ಸೂಕ್ತ ಸಂದರ್ಭದಲ್ಲಿ ಶತ್ರು ರಾಷ್ಟ್ರದ ವಿಮಾನವನ್ನು ಹೊಡೆದುರುಳಿಸಿದ್ದರು  ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಬಾಲಕೋಟ್ ಏರ್ ಸ್ಟ್ರೈಕ್ ಆದ ಮಾರನೇ ದಿನ ಫೆಬ್ರವರಿ 27 ರಂದು ಪಾಕಿಸ್ತಾನದ ಯುದ್ಧ ವಿಮಾನಗಳು ಜಮ್ಮು- ಕಾಶ್ಮೀರ ಮತ್ತು ನೌಶೇರಾ ಸೆಕ್ಟರ್ ನತ್ತ ಬರುತ್ತಿದುದ್ದನ್ನು ಕೂಡಲೇ ಭಾರತೀಯ ವಾಯುಪಡೆ ತಂಡಕ್ಕೆ ಅಗರ್ ವಾಲ್ ತಿಳಿಸಿದ್ದರು. ಪಾಕಿಸ್ತಾನ ವಿರುದ್ಧ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲು ಅವರು ಸಹಕರಿಸಿದ್ದರು. 

ಶತ್ರು ರಾಷ್ಟ್ರದಿಂದ ಪ್ರತೀಕಾರ ತೀರಿಸಿಕೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಅದಕ್ಕಾಗಿ ಎಲ್ಲರೂ ಸಿದ್ದರಿದ್ದೇವು. ಅವರು 24 ಗಂಟೆಗಳಲ್ಲಿ ಪ್ರತೀಕಾರ ತೀರಿಸಿಕೊಂಡರು. ಆರಂಭದಲ್ಲಿ, ಕೆಲವೇ ಪಾಕಿಸ್ತಾನಿ ವಿಮಾನಗಳು ಇದ್ದವು ಆದರೆ ನಿಧಾನವಾಗಿ ವಿಮಾನಗಳ ಸಾಂದ್ರತೆಯು ಹೆಚ್ಚಾಯಿತು, ಯುದ್ದ ಮಾಡಬೇಕೆಂಬ ಉದ್ದೇಶದಿಂದ ಅವರು ಭಾರತದತ್ತ ಬಂದರೂ  ಅವರ ಕಾರ್ಯಾಚರಣೆಯನ್ನು ವಿಫಲಗೊಳಿಸುವಲ್ಲಿ ನಮ್ಮ ತಂಡ ಯಶಸ್ವಿಯಾಯಿತು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com