ಮುಂದಿನ ವಾರದಿಂದ ಕಾಶ್ಮೀರದಲ್ಲಿ ಶಾಲೆಗಳು ಪುನರ್ ಆರಂಭ- ಅಧಿಕಾರಿಗಳ ಹೇಳಿಕೆ

ಮುಂದಿನ ವಾರದಿಂದ ಶಾಲೆಗಳು ಪುನರ್ ಆರಂಭವಾಗಲಿವೆ ಎಂದು ಜಮ್ಮು- ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿ. ವಿ. ಆರ್. ಸುಬ್ರಮಣ್ಯಂ ತಿಳಿಸಿದ್ದಾರೆ.
ಮುಂದಿನ ವಾರದಿಂದ ಕಾಶ್ಮೀರದಲ್ಲಿ ಶಾಲೆಗಳು ಪುನರ್ ಆರಂಭ- ಅಧಿಕಾರಿಗಳ ಹೇಳಿಕೆ

ಜಮ್ಮು- ಕಾಶ್ಮೀರ: ಸಂವಿಧಾನದ 370ನೇ ವಿಧಿ ರದ್ದುಗೊಂಡ ನಂತರ ಕಣಿವೆರಾಜ್ಯದಲ್ಲಿ  ಸ್ಥಗಿತಗೊಂಡಿದ್ದ ಆಡಳಿತ ಕಚೇರಿಗಳ  ಕಾರ್ಯಗಳು ಇಂದು ಎಂದಿನಂತೆ ನಡೆದಿದ್ದು,  ಮುಂದಿನ ವಾರದಿಂದ ಶಾಲೆಗಳು ಪುನರ್ ಆರಂಭವಾಗಲಿವೆ ಎಂದು ಜಮ್ಮು- ಕಾಶ್ಮೀರ ಮುಖ್ಯ ಕಾರ್ಯದರ್ಶಿ ಬಿ. ವಿ. ಆರ್. ಸುಬ್ರಮಣ್ಯಂ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಬ್ರಮಣ್ಯಂ, ಆಗಸ್ಟ್ 5 ರಿಂದ ನಿರ್ಬಂಧ ಹೇರಿದ ನಂತರ ಯಾವುದೇ ಪ್ರಾಣ ಹಾನಿಯಾಗಿಲ್ಲ ಅಥವಾ ದೊಡ್ಡ ಪ್ರಮಾಣದ ಗಾಯವಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು. 

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸವಲತ್ತು ಒದಗಿಸುತ್ತಿದ್ದ ಸಂವಿಧಾನದ 370 ನೇ ವಿಧಿ ರದ್ದುಗೊಂಡು ,ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ನಿರ್ಬಂಧ ಹೇರಲಾಗಿತ್ತು ಎಂದು ತಿಳಿಸಿದರು.

ಜಮ್ಮು- ಕಾಶ್ಮೀರದಲ್ಲಿನ 12 ಜಿಲ್ಲೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಐದು ಜಿಲ್ಲೆಗಳಲ್ಲಿ ಸರಳ ರೀತಿಯ ನಿರ್ಬಂಧ ಇರುವುದಾಗಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com