ಡಿಡಿ ನ್ಯೂಸ್ ಜನಪ್ರಿಯ ನಿರೂಪಕಿ ನೀಲಂ ಶರ್ಮಾ ಹಠಾತ್ ನಿಧನ

ಡಿಡಿನ್ಯೂಸ್ ಜನಪ್ರಿಯ ನಿರೂಪಕಿ ನೀಲಂ ಶರ್ಮಾ ಹಠಾತ್ ನಿಧನರಾಗಿದ್ದಾರೆ. ದೂರದರ್ಶನದಲ್ಲಿ ಕಳೆದ 20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದ ನೀಲಂ ಶರ್ಮಾ ಇಂದು ಕೊನೆಯುಸಿರೆಳೆದಿದ್ದಾರೆ.

Published: 17th August 2019 08:13 PM  |   Last Updated: 17th August 2019 08:18 PM   |  A+A-


Posted By : Nagaraja AB
Source : The New Indian Express

ನವದೆಹಲಿ: ಡಿಡಿನ್ಯೂಸ್ ಜನಪ್ರಿಯ ನಿರೂಪಕಿ ನೀಲಂ ಶರ್ಮಾ ಹಠಾತ್ ನಿಧನರಾಗಿದ್ದಾರೆ. ದೂರದರ್ಶನದಲ್ಲಿ ಕಳೆದ 20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದ ನೀಲಂ ಶರ್ಮಾ ಇಂದು ಕೊನೆಯುಸಿರೆಳೆದಿದ್ದಾರೆ.

ಕ್ಯಾನ್ಸರ್ ನಿಂದ ನೀಲಂ ಶರ್ಮಾ ಬಳಲುತ್ತಿದ್ದರು ಎಂಬುದು ಮೂಲಗಳಿಂದ ತಿಳಿದುಬಂದಿದೆ.  ಕಳೆದ 20 ವರ್ಷಗಳಿಂದಲೂ ಡಿಡಿ ನ್ಯೂಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೀಲಂ ಶರ್ಮಾ,  ನಾರಿ ಶಕ್ತಿ ಪ್ರಶಸ್ತಿಗೆ ಭಾಜರಾಗಿದ್ದರು. 

ಈ ವರ್ಷದ ಆರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೀಲಂ ಶರ್ಮಾ ಅವರಿಗೆ ನಾರಿ ಶಕ್ತಿ  ಪ್ರಶಸ್ತಿ ನೀಡಿ ಗೌರವಿಸಿದ್ದರು.  ಅವರ ನಿಧನಕ್ಕೆ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪದ ಮಹಾಪೂರವೇ ಹರಿದುಬರುತ್ತಿದೆ. 

 

ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ, ಪ್ರಸಾರ ಭಾರತಿ ಸಿಇಒ ಶಶಿ ಶೇಕರ್ ಮತ್ತಿತರ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp