ಭೂತಾನ್ ನಲ್ಲಿ ಮೋದಿ
ಭೂತಾನ್ ನಲ್ಲಿ ಮೋದಿ

ಹತ್ತು ಒಪ್ಪಂದಗಳಿಗೆ ಭಾರತ - ಬೂತಾನ್ ಸಹಿ: ಬೆಂಗಳೂರಿನ ಕಾನೂನು ವಿವಿ- ಬೂತಾನ್ ಕಾನೂನು ಶಾಲೆ ನಡುವೆ ಒಡಂಬಡಿಕೆ

ಎರಡು ದಿನಗಳ ಬೂತಾನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಡಾ: ಲೊಟೆ ಶೆರಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ...

ಥಿಂಪು: ಎರಡು ದಿನಗಳ ಬೂತಾನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಡಾ: ಲೊಟೆ ಶೆರಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು.

ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಇರುವ ಎಲ್ಲಾ ಮಾರ್ಗೋಪಾಯಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು. ಅಲ್ಲದೆ, ನಿಯೋಗ ಮಟ್ಟದ ಮಾತುಕತೆ ನಡೆಸಿದರು. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತಶಾಸ್ತ್ರ ಮತ್ತು ನ್ಯಾಯಾಂಗ ಕ್ಷೇತ್ರ  ಸೇರಿದಂತೆ ಪ್ರಮುಖ 10 ತಿಳಿವಳಿಕೆ ಪತ್ರಕ್ಕೆ ಭಾರತ ಮತ್ತು ಭೂತಾನ್ ಸಹಿ ಹಾಕಿದವು.

Related Stories

No stories found.

Advertisement

X
Kannada Prabha
www.kannadaprabha.com